ತಮಿಳುನಾಡಿನ ಆಲ್'ರೌಂಡರ್ ವಾಷಿಂಗ್ಟ್'ನ್ ಸುಂದರ್, ಹರ್ಯಾಣದ ಆಲ್'ರೌಂಡರ್ ದೀಪಕ್ ಹೂಡ, ಕೇರಳದ ಎಡಗೈ ವೇಗಿ ಬಸೀಲದ ತಂಪಿ ಹಾಗೂ ಗುಜರಾತ್'ನ ವೇಗಿ ಜಯದೇವ್ ಉನದ್ಕಟ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಂಬೈ(ಡಿ.04): ಬಿಸಿಸಿಐ ಡಿಸೆಂಬರ್ 20ರಿಂದ ಆರಂಭವಾಗುವ ಟಿ20 ಸರಣಿ ಹಾಗೂ 2018ರ ಜನವರಿಯಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಶ್ರೀಲಂಕಾ ಟಿ20 ಸರಣಿಗೆ ವಿರಾಟ್ ಕೊಹ್ಲಿ'ಗೆ ವಿಶ್ರಾಂತಿ ನೀಡಿ ರೋಹಿತ್ ಶರ್ಮಾ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಜನವರಿಯಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿಯೇ ನಾಯಕರಾಗಿರುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಬಹುತೇಕ ಶ್ರೀಲಂಕಾ ವಿರುದ್ಧ ಆಡುತ್ತಿರುವ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು, ವಿಕೇಟ್ ಕೀಪರ್ ಪಾರ್ಥೀವ್ ಪಟೇಲ್ ಅವರಿಗೆ ಸ್ಥಾನ ನೀಡಲಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ನಾಲ್ವರು ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.

ತಮಿಳುನಾಡಿನ ಆಲ್'ರೌಂಡರ್ ವಾಷಿಂಗ್ಟ್'ನ್ ಸುಂದರ್, ಹರ್ಯಾಣದ ಆಲ್'ರೌಂಡರ್ ದೀಪಕ್ ಹೂಡ, ಕೇರಳದ ಎಡಗೈ ವೇಗಿ ಬಸೀಲದ ತಂಪಿ ಹಾಗೂ ಗುಜರಾತ್'ನ ವೇಗಿ ಜಯದೇವ್ ಉನದ್ಕಟ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಟಿ20 ತಂಡ : ರೋಹಿತ್ ಶರ್ಮಾ(ನಾಯಕ), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ,, ವಿ. ಸುಂದರ್, ಯಜುವೇಂದ್ರ ಚಹಲ್, ಕುಲ್​ದೀಪ್ ಯಾದವ್, ದೀಪಕ್ ಹೂಡ, ಬುಮ್ರಾ, ಎಂ. ಸಿರಾಜ್, ಬಾಸಿಲ್ ತಂಪಿ, ಉನಾಡ್ಕತ್​

ಟೆಸ್ಟ್ 'ಗೆ ತಂಡ : ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್,ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ,ವೃದ್ದೀಮಾನ್ ಸಾಹ, ಆರ್. ಅಶ್ವಿನ್, ಆರ್. ಜಡೇಜಾ, ಪಾರ್ಥಿವ್ ಪಟೇಲ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್​, ಮೊಹಮದ್ ಶಮಿ , ಇಶಾಂತ್ ಶರ್ಮಿ​, ಉಮೇಶ್ ಯಾದವ್, ಜೆ. ಬುಮ್ರಾ