ಪಾಕ್ ಸರಣಿಗೆ ಕೆರಿಬಿಯನ್ ಪಡೆಯನ್ನು ಮುನ್ನಡೆಸಲಿದ್ದಾರೆ ಹೊಸ ಸಾರಥಿ

Jason Mohammed To Lead West Indies In Pakistan T20Is
Highlights

ಏಪ್ರಿಲ್ 1,2,3ರಂದು ಕ್ರಮವಾಗಿ ಮೂರು ಪಂದ್ಯಗಳು ಜರುಗಲಿವೆ. ಭದ್ರತಾ ಕಾರಣಗಳಿಂದಾಗಿ ಹಾಲಿ ನಾಯಕ ಕಾರ್ಲೋಸ್ ಬ್ರಾಥ್'ವೈಟ್ ಪಾಕಿಸ್ತಾನದ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇನ್ನು ವಿಕೆಟ್ ದಿನೇಶ್ ರಾಮ್ದಿನ್ ತಂಡ ಕೂಡಿಕೊಂಡಿದ್ದಾರೆ.

ಜಮೈಕಾ(ಮಾ.30): ಪಾಕಿಸ್ತಾನದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ 13 ಆಟಗಾರರನ್ನೊಳಗೊಂಡ ವೆಸ್ಟ್'ಇಂಡಿಸ್ ತಂಡವನ್ನು ಪ್ರಕಟಿಸಲಾಗಿದ್ದು, ಆಲ್ರೌಂಡರ್ ಜೇಸನ್ ಮೊಹಮ್ಮದ್ ತಂಡವನ್ನು ಮುನ್ನಡೆಸಲಿದ್ದಾರೆ.

ಏಪ್ರಿಲ್ 1,2,3ರಂದು ಕ್ರಮವಾಗಿ ಮೂರು ಪಂದ್ಯಗಳು ಜರುಗಲಿವೆ. ಭದ್ರತಾ ಕಾರಣಗಳಿಂದಾಗಿ ಹಾಲಿ ನಾಯಕ ಕಾರ್ಲೋಸ್ ಬ್ರಾಥ್'ವೈಟ್ ಪಾಕಿಸ್ತಾನದ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇನ್ನು ವಿಕೆಟ್ ದಿನೇಶ್ ರಾಮ್ದಿನ್ ತಂಡ ಕೂಡಿಕೊಂಡಿದ್ದಾರೆ.

ವೆಸ್ಟ್'ಇಂಡಿಸ್ ತಂಡದಲ್ಲಿ ಮರ್ಲಾನ್ ಸ್ಯಾಮುಯಲ್ಸ್, ದಿನೇಶ್ ರಾಮ್ದಿನ್ ಹಾಗೂ ಸ್ಯಾಮುಯಲ್ ಬದ್ರಿ ಸ್ಥಾನ ಪಡೆದ ಅನುಭವಿ ಆಟಗಾರರೆನಿಸಿಕೊಂಡಿದ್ದಾರೆ. ಇನ್ನು ಜೇಸನ್ ಹೋಲ್ಡರ್, ಕ್ರಿಸ್ ಗೇಲ್ ಮತ್ತು ದೇವೇಂದ್ರ ಬಿಶೂ ಈ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಮೇಲ್ನೋಟಕ್ಕೆ ಸಾಕಷ್ಟು ಅನನುಭವಿ ಆಟಗಾರರೊಂದಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಂತಿದೆ. ಇತ್ತೀಚೆಗೆ ಮುಕ್ತಾಯವಾದ ವಿಶ್ವಕಪ್ ಅರ್ಹತಾ ಸುತ್ತಿನಾ ಪಂದ್ಯದಲ್ಲಿ ಆಡಿದ ನಾಲ್ವರು ಕ್ರಿಕೆಟಿಗರು ಮಾತ್ರ ಪಾಕಿಸ್ತಾನ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

loader