Asianet Suvarna News Asianet Suvarna News

ಸಂಪರ್ಕಕ್ಕೆ ಸಿಗದ ಕಾಶ್ಮೀರ ಕ್ರಿಕೆ​ಟಿ​ಗ​ರ ಹುಡುಕಾಟಕ್ಕೆ ಜಾಹೀರಾತು!

ಕಾಶ್ಮೀರ ಕಣಿವೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಟರ್‌ನೆಟ್‌ ವ್ಯವಸ್ಥೆ ಕಡಿತಗೊಳಿಸಲಾಗಿದೆ. 370ನೇ ವಿಧಿ ರದ್ದು ಪಡಿಸಿದ್ದರ ಪರಿಣಾಮ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇದರ ಬಿಸಿ ಈಗ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡಕ್ಕೂ ತಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Jammu and Kashmir Cricket Association forced to advertise on TV to reach out to players
Author
New Delhi, First Published Aug 29, 2019, 1:28 PM IST

ನವದೆಹಲಿ[ಆ.29]: 370ನೇ ವಿಧಿ ರದ್ದತಿಯಿಂದಾಗಿ ಭದ್ರತೆ ದೃಷ್ಟಿ​ಯಿಂದ ಕಾಶ್ಮೀರದಲ್ಲಿ ಮೊಬೈಲ್‌ ನೆಟ್‌ವರ್ಕ್ ಮೇಲೆ ನಿರ್ಬಂಧ ಹೇರ​ಲಾ​ಗಿದೆ. ಇದರ ಬಿಸಿ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡಕ್ಕೂ ತಟ್ಟಿದೆ.

ಜಮ್ಮು ಕಾಶ್ಮೀರದಲ್ಲಿ ಕ್ಯಾಪ್ಟನ್ ನಾಪತ್ತೆ: ಟೂರ್ನಿ ಆಡಲು ಆಟಗಾರರೇ ಇಲ್ಲ..!

ಹೌದು, ಇದರಿಂದಾಗಿ ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಗೆ ತನ್ನ ಆಟ​ಗಾ​ರ​ರನ್ನು ಸಂಪ​ರ್ಕಿ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಈಗಾ​ಗಲೇ ಅಂಡರ್‌-23 ವಿಝ್ಝಿ ಟ್ರೋಫಿ​ಯಿ​ಂದ ಹಿಂದೆ ಸರಿ​ದಿ​ರುವ ಜಮ್ಮು-ಕಾಶ್ಮೀರ ತಂಡ, ಮುಂದಿನ ತಿಂಗಳು ಆರಂಭ​ಗೊ​ಳ್ಳ​ಲಿ​ರುವ ವಿಜಯ್‌ ಹಜಾರೆ ರಾಷ್ಟ್ರೀ​ಯ ಏಕ​ದಿನ ಟೂರ್ನಿಗೆ ಶಿಬಿರ ಆರಂಭಿ​ಸಲು ಆಟ​ಗಾ​ರ​ರೊಂದಿಗೆ ಸಂವ​ಹನ ನಡೆ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಹೀಗಾಗಿ ಸ್ಥಳೀಯ ಟೀವಿ ವಾಹಿನಿಗಳಲ್ಲಿ ಆಟ​ಗಾ​ರ​ರು, ಕ್ರಿಕೆಟ್‌ ಸಂಸ್ಥೆಯನ್ನು ಸಂಪ​ರ್ಕಿಸಿ ಶಿಬಿರಕ್ಕೆ ಹಾಜ​ರಾ​ಗು​ವಂತೆ ಜಾಹೀ​ರಾತು ನೀಡ​ಲಾ​ಗಿದೆ. ಭಾರ​ತೀಯ ಕ್ರಿಕೆಟ್‌ನಲ್ಲಿ ಇಂತಹ ಪ್ರಸಂಗ ಬಹಳ ಅಪ​ರೂ​ಪ​ವಾ​ಗಿದ್ದು, ಮಾಧ್ಯ​ಮ​ಗ​ಳ​ಲ್ಲಿ ಭಾರೀ ಸುದ್ದಿ​ಯಾ​ಗಿದೆ.

ಕಾಶ್ಮೀರದಲ್ಲಿ ಹೈಅಲರ್ಟ್; ಕಣಿವೆ ರಾಜ್ಯ ತೊರೆಯಲು ಇರ್ಫಾನ್‌ಗೆ ಸೂಚನೆ!

ಜಮ್ಮು-ಕಾಶ್ಮೀರ ತಂಡದ ಸಲಹೆಗಾರ​ರಾ​ಗಿ​ರು​ವ ಭಾರತೀಯ ಕ್ರಿಕೆ​ಟಿಗ ಇರ್ಫಾನ್‌ ಪಠಾಣ್‌, ‘ಜಮ್ಮು ಆಟಗಾರರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಕಾಶ್ಮೀರ ಆಟಗಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇಂತ​ಹ ಅನುಭವ ಎಂದೂ ಆಗಿ​ರ​ಲಿಲ್ಲ. ಇದು ನನ್ನ ವೃತ್ತಿಜೀವನದ ವಿಶೇಷ ಸವಾಲು’ ಎಂದಿದ್ದಾರೆ.
 

Follow Us:
Download App:
  • android
  • ios