ನವದೆಹಲಿ(ಆ.20): ಕೇಂದ್ರಾಡಳಿ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಸಂವಹನದ ಮೇಲೆ ನಿರ್ಬಂಧ ಹೇರಿದ್ದ ಕಾರಣ ತನ್ನ ಆಟಗಾರರನ್ನೇ ಸಂಪರ್ಕಿಸಲು ಸಾಧ್ಯವಾಗದೆ ಜಮ್ಮು ಕಾಶ್ಮೀರ ಕ್ರಿಕೆಟ್‌ ಸಂಸ್ಥೆ (ಜೆಕೆಸಿಎ) ವಿಝ್ಝಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದೆ. 

ಕಾಶ್ಮೀರದಲ್ಲಿ ಹೈಅಲರ್ಟ್; ಕಣಿವೆ ರಾಜ್ಯ ತೊರೆಯಲು ಇರ್ಫಾನ್‌ಗೆ ಸೂಚನೆ!

ಆಂಧ್ರ ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ ವಿಝ್ಝಿ ಟ್ರೋಫಿ ಆ.22ರಿಂದ ವಿಶಾಖಪಟ್ಟಣಂನಲ್ಲಿ ಆರಂಭವಾಗಲಿದೆ. ‘ಕಣಿವೆಯಲ್ಲಿ ಸ್ಥಿತಿ ಸುಧಾರಿಸುತ್ತಿದೆ. ಆದರೆ ಆಟಗಾರರನ್ನು ಸಂಪರ್ಕಿಸುವುದೇ ಅತ್ಯಂತ ಸವಾಲಿನ ಸಂಗತಿಯಾಗಿದೆ. ಕಚೇರಿಯಲ್ಲಿ ಎಲ್ಲಾ ಆಟಗಾರರ ಮೊಬೈಲ್‌ ಸಂಖ್ಯೆಗಳಿವೆ. ಆದರೆ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ನಾಯಕ ಪರ್ವೇಜ್‌ ರಸೂಲ್‌ ಎಲ್ಲಿದ್ದಾರೆಂದೇ ತಿಳಿಯುತ್ತಿಲ್ಲ’ ಎಂದು ಜೆಕೆಸಿಎ ಮುಖ್ಯಸ್ಥ ಬುಖಾರಿ ತಿಳಿಸಿದ್ದಾರೆ.

ಇಂಟರ್ನೆಟ್ ಸ್ಥಗಿತಗೊಳಿಸಿದ್ದರೂ, ಗಿಲಾನಿಗೆ ನೆಟ್ ಸೇವೆ: BSNL ಅಧಿಕಾರಿಗಳು ಅಮಾನತು!

ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ [ಆರ್ಟಿಕಲ್ 370] ರದ್ದು ಮಾಡಿದ ಬೆನ್ನಲ್ಲೇ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯ ಮೇಲೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಜಮ್ಮು ಕಾಶ್ಮೀರ ಕ್ರಿಕೆಟ್‌ ಸಂಸ್ಥೆಗೆ ತಮ್ಮ ಆಟಗಾರರನ್ನು ಸಂಪರ್ಕಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.