ಬೆಂಗಳೂರು(ಮಾ.11):  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಎಫ್‌ಸಿ, ಸತತ 2ನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾರ್ಥ್ ಈಸ್ಟ್ ಯುನೈಟೆಡ್ ತಂಡವವನ್ನು 3-0 ಅಂತರದಲ್ಲಿ ಸೋಲಿಸಿದ BFC ಫೈನಲ್ ಪ್ರವೇಶಿಸಿತು. 72ನೇ ನಿಮಿಷದಲ್ಲಿ ಮಿಕು, 87ನೇ ನಿಮಿಷದಲ್ಲಿ  ದಿಮಾಸ್ ದೆಲ್ಗಾಡೋ ಹಾಗೂ 90ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿ  ಗಳಿಸಿದ ಗೋಲುಗಳ ನೆರವಿನಿಂದ  ನಾರ್ತ್ ಈಸ್ಟ್ ಯುನೈಟೆಡ್  ತಂಡವನ್ನು 3-0 ( ಸರಾಸರಿ 4-2) ಗೋಲುಗಳ ಅಂತರದಲ್ಲಿ ಮಣಿಸಿತು.

ಇದನ್ನೂ ಓದಿ: ಮುಜುಗರಕ್ಕೊಳಗಾದ ರಿಯಲ್‌ ಕಾಶ್ಮೀರ್‌ ಜತೆ BFC ಸ್ನೇಹಾರ್ಥ ಪಂದ್ಯ

ಪ್ರಥಮಾರ್ಧದಲ್ಲಿ ತಂಡದ ಸ್ಟಾರ್ ಫುಟ್ಬಾಲ್ ಪಟು ಮಿಕು ಸೇರಿದಂತೆ ಇತರ ಆಟಗಾರರು ಸಿಕ್ಕ ಅವಕಾಶವನ್ನು ಕೈಚೆಲ್ಲಿರುವುದು ಬೆಂಗಳೂರಿನ ಪಾಲಿಗೆ ನಿಜಕ್ಕೂ ಆತಂಕ. ಮೊದಲ 45 ನಿಮಿಷಗಳ  ಆಟದಲ್ಲಿ ಮಿಕು  ಹ್ಯಾಟ್ರಿಕ್ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.  23ನೇ ನಿಮಿಷದಲ್ಲಿ ತುಳಿದ ಚೆಂಡು ಗೋಲ್ ಬಾಕ್ಸ್‌ನಿಂದ ಹೊರಕ್ಕೆ ಚಿಮ್ಮಿತ್ತು. 25 ನಿಮಿಷದಲ್ಲಿ ತುಳಿದ ಚೆಂಡು ಗೋಲ್ ಬಾಕ್ಸ್‌ನ ಮೇಲಿಂದ ಸಾಗಿತ್ತು. 33ನೇ ನಿಮಿಷದಲ್ಲಿ ತುಳಿದ ಚೆಂಡು ಕೂಡ ಗೋಲ್‌ಕೀಪರ್ ಅವರ ಕೈ ಸೇರಿತ್ತು. 

ಇದನ್ನೂ ಓದಿ:  ಮುಂಬೈನಲ್ಲಿ ಫುಟ್ಬಾಲ್ ಆಡಿದ ಧೋನಿ!

ಮೊದಲ ಹಂತದ ಸೆಮಿಫೈನಲ್ ಪಂದ್ಯದಲ್ಲಿ ನಾರ್ತ್ ಈಸ್ಟ್ ವಿರುದ್ಧ ಸೋತಿದ್ದ ಬೆಂಗಳೂರು ತಂಡಕ್ಕೆ  ಜಯ ಮಾತ್ರವಲ್ಲ, ಗೋಲಿನ ಮುನ್ನಡೆಯೊಂದಿಗೆ ಯಶಸ್ಸು ಕಾಣಬೇಕಾದ ಅನಿವಾರ್ಯತೆ ಇತ್ತು. ಕಂಠೀರವ ಕ್ರೀಡಾಂಗಣದಲ್ಲಿ 2ನೇ ಲೆಗ್ ಸೆಮಿಫೈನಲ್ ಪಂದ್ಯದಲ್ಲಿ BFC ಗೆಲುವಿನ ಜೊತೆಗೆ ಗೋಲಿನ ಮುನ್ನಡೆ ಪಡೆದು ಫೈನಲ್‌ಗೆ ಲಗ್ಗೆ ಇಟ್ಟಿತು. ಕಳೆದ ಆವೃತ್ತಿಯಲ್ಲೂ ಬೆಂಗಳೂರು ಫೈನಲ್ ಪ್ರವೇಶಿತ್ತು. ಆದರೆ ಚೆನ್ನೈಯನ್ ಎಫ್‌ಸಿ ವಿರುದ್ಧ ಸೋಲು ಕಂಡು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.