ನವದೆಹಲಿ(ಫೆ.20): ಪುಲ್ವಾಮಾ ಉಗ್ರರ ದಾಳಿಯಿಂದಾಗಿ ಭಾರತದ ಐ-ಲೀಗ್‌ ಫುಟ್ಬಾಲ್‌ ಟೂರ್ನಿಯ ರಿಯಲ್‌ ಕಾಶ್ಮೀರ್‌ ತಂಡ ಭಾರೀ ಮುಜುಗರಕ್ಕೆ ಒಳಗಾಗಿದೆ. ಇತ್ತೀಚೆಗಷ್ಟೇ ಶ್ರೀನಗರಕ್ಕೆ ತೆರಳಿ ಪಂದ್ಯವನ್ನಾಡಲು ಟೂರ್ನಿಯ ಮತ್ತೊಂದು ತಂಡವಾದ ಮಿನರ್ವಾ ಪಂಜಾಬ್‌ ನಿರಾಕರಿಸಿತ್ತು.

ಇದನ್ನೂ ಓದಿ: ಬ್ರೆಜಿಲ್ ಫುಟ್ಬಾಲ್ ಕ್ಲಬ್’ನಲ್ಲಿ ಬೆಂಕಿ ಅವಘಡ: 10 ಮಂದಿ ದುರ್ಮರಣ

ಈ ವಿವಾದ ನ್ಯಾಯಾಲಯದ ಮೆಟ್ಟಿಲೇರುತ್ತಿರುವ ಬೆನ್ನಲ್ಲೇ ಮಾಜಿ ಐ-ಲೀಗ್‌ ಚಾಂಪಿಯನ್‌, ಹಾಲಿ ಐಎಸ್‌ಎಲ್‌ ಟೂರ್ನಿಯ ಅಗ್ರ ತಂಡ ಬೆಂಗಳೂರು ಎಫ್‌ಸಿ ಶ್ರೀನಗರಕ್ಕೆ ತೆರಳಿ ರಿಯಲ್‌ ಕಾಶ್ಮೀರ್‌ ವಿರುದ್ಧ ಸ್ನೇಹಾರ್ಥ ಪಂದ್ಯವನ್ನು ಆಡುವ ಪ್ರಸ್ತಾಪವಿರಿಸಿದೆ. 
ಇದನ್ನೂ ಓದಿ: ಅಂಧರ ತಂಡಕ್ಕೆ ಭಾರತ ಫುಟ್ಬಾಲಿಗರಿಂದ 50 ಸಾವಿರ ರುಪಾಯಿ ನೆರವು!

ಇದರೊಂದಿಗೆ ಭಾರತದಲ್ಲಿ ಫುಟ್ಬಾಲ್‌ಗೆ ಮತ್ತಷ್ಟುಪ್ರೋತ್ಸಾಹ ಸಿಗುವಂತೆ ಮಾಡಲು ಬಿಎಫ್‌ಸಿ ಮುಂದಾಗಿದೆ. ಬಿಎಫ್‌ಸಿ ಪ್ರಸ್ತಾಪಕ್ಕೆ ಒಪ್ಪಿದ ರಿಯಲ್‌ ಕಾಶ್ಮೀರ್‌ ಮುಂದಿನ ತಿಂಗಳು ಶ್ರೀನಗರಕ್ಕೆ ಆಗಮಿಸುವಂತೆ ಆಹ್ವಾನ ನೀಡಿದೆ.