ಮುಂಬೈ(ಆ.29): ಭಾರತ ಎ ತಂಡ ಹಾಗೂ ಅಂಡರ್-19  ತಂಡದ ಕೋಚ್ ಜವಾಬ್ದಾರಿಗೆ ರಾಹುಲ್ ದ್ರಾವಿಡ್ ಗುಡ್ ಬೈ ಹೇಳಿದ್ದಾರೆ. ರಾಹುಲ್ ಮಾರ್ಗದರ್ಶನದಲ್ಲಿ ಕಿರಿಯರ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಇಷ್ಟೇ ಅಲ್ಲ ಹಲವು ಕ್ರಿಕೆಟಿಗರು ಟೀಂ ಇಂಡಿಯಾ ಪ್ರತಿನಿದಿಸಿದ್ದಾರೆ. ಇದೀಗ ರಾಹುಲ್ ದ್ರಾವಿಡ್ ಬದಲು ಭಾರತ ಎ ತಂಡಕ್ಕೆ ಸಿತಾಂಶು ಕೋಟಕ್ ಹಾಗೂ ಅಂಡರ್ 19 ತಂಡಕ್ಕೆ ಪರಾಸ್ ಮಂಬ್ರೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಸ್ವಹಿತಾಸಕ್ತಿಗೆ ದ್ರಾವಿಡ್‌ ಒಳಪಡಲ್ಲ: BCCI ಸ್ಪಷ್ಟನೆ

ರಾಹುಲ್ ದ್ರಾವಿಡ್‌ರನ್ನು ಇತ್ತೀಚೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ(NCA) ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ದ್ರಾವಿಡ್ ಮೇಲೆ ಸ್ವಹಿತಾಸಕ್ತಿ ಆರೋಪ ಕೂಡ ಕೇಳಿ ಬಂದಿತ್ತು. ಇಷ್ಟಾದರೂ ದ್ರಾವಿಡ್ 3 ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಬಿಸಿಸಿಐ ರಾಹುಲ್ ದ್ರಾವಿಡ್‌ರನ್ನು NCA ಮಾತ್ರ ಸೀಮಿತಗೊಳಿಸಿದೆ. 

ಇದನ್ನೂ ಓದಿ: ಮರ್ಸಿಡೀಸ್ ಬೆಂಝ್ GLE ಖರೀದಿಸಿದ ದ್ರಾವಿಡ್; ಇಲ್ಲಿದೆ ಈ ಕಾರಿನ ವಿಶೇಷತೆ!

ನೂತನ ಕೋಚ್ ಆಗಿ ಆಯ್ಕೆಯಾಗಿರುವ ಸಿತಾಂಶು ಕೋಟಕ್ ಎಡಗೈ ಬ್ಯಾಟ್ಸ್‌ಮನ್ ಆಗಿ ಗಮನಸೆಳೆದಿದ್ದರು. ಸೌರಾಷ್ಟ್ರ ರಣಜಿ ತಂಡದ ನಾಯಕನಾಗಿಯೂ ಗಮನಸೆಳೆದಿದ್ದಾರೆ. 130 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಸಿತಾಂಶು, ಇತ್ತೀಚೆಗಿನ ಭಾರತ ಎ ತಂಡದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.  130 ಥಮ ದರ್ಜೆ ಪಂದ್ಯದಿಂದ  8,061 ರನ್ ಸಿಡಿಸಿದ್ದಾರೆ.  15 ಶತಕ ಹಾಗೂ 55 ಅರ್ಧಶತಕ ಸಿಡಿಸಿದ್ದಾರೆ.

ಅಂಡರ್ 19 ತಂಡಕ್ಕೆ ಕೋಚ್ ಆಗಿ ಆಯ್ಕೆಯಾಗಿರುವ ಪರಾಸ್, ಭಾರತದ ಮಾಜಿ ವೇಗಿ. ಭಾರತದ ಪರ 2 ಟೆಸ್ಟ್ ಹಾಗೂ 3 ಏಕದಿನ ಪಂದ್ಯ ಆಡಿದ್ದಾರೆ.  ಇತ್ತೀಚೆಗೆ ಭಾರತದ ತಂಡದ ಬೌಲಿಂಗ್ ಕೋಚ್ ಹುದ್ದಗೂ ಅರ್ಜಿ ಸಲ್ಲಿಸಿದ್ದರು.