ಅಪ್ಪ ಕಾರ್ಗಿಲ್ ಯುದ್ಧ ಜಯಿಸಿದ ಸೈನಿಕ; ಮಗ ಟೀಂ ಇಂಡಿಯಾ ನಾಯಕ!

1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಸೈನಿಕನ ಮಗ ಇದೀಗ ಟೀಂ ಇಂಡಿಯಾ ಅಂಜರ್ 19 ತಂಡದ ನಾಯಕನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅಪ್ಪ ಯುದ್ಧಭೂಮಿಯಲ್ಲಿ ಹೋರಾಡಿದರೆ, ಮಗ ಮೈದಾನದಲ್ಲಿ ಹೋರಾಡುತ್ತಿದ್ದಾರೆ. ಅಪ್ಪ ಮಗನ ದೇಶ ಸೇವೆಯ ರೋಚಕ ಸ್ಟೋರಿ ಇಲ್ಲಿದೆ.

Kargil War veteran son Dhruv Jurel lead team india in under 19 asia cup

ಆಗ್ರ(ಆ.29): ಬದ್ಧವೈರಿ ಪಾಕಿಸ್ತಾನ ವಿರುದ್ದದ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಯಾವ ಭಾರತೀಯನೂ ಮರೆತಿಲ್ಲ. ಶತ್ರು ಸೈನ್ಯನವನ್ನು ಹಿಮ್ಮೆಟ್ಟಿಸಿದ ಭಾರತೀಯ ವೀರ ಯೋಧರು ನಮ್ಮ ನೆಲವನ್ನು ಕಾಪಾಡಿದರು. ಇದೇ ಯುದ್ದದಲ್ಲಿ ಸೈನಿಕನಾಗಿ ಹೋರಾಡಿದ ನೇಮ್ ಸಿಂಗ್ ಜುರೆಲ್ 2008ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಿಯಾದರು. ಅಪ್ಪ ದೇಶ ಸೇವೆ ಬಳಿಕ ಇದೀಗ ಮಗ ದೇಶ ಸೇವೆಗೆ ಸಜ್ಜಾಗಿದ್ದಾರೆ. ಆದರೆ ಪುತ್ರ ಧ್ರುವ ಜುರೆಲ್ ಕ್ರಿಕೆಟ್ ಮೂಲಕ ದೇಶ ಸೇವೆಗೆ ಮಾಡುತ್ತಿದ್ದಾನೆ.

ಇದನ್ನೂ ಓದಿ: ಭಾರತ ಎ, ಅಂಡರ್-19 ಕೋಚ್ ಸ್ಥಾನಕ್ಕೆ ದ್ರಾವಿಡ್ ಗುಡ್‌ಬೈ; ಹೊಸಬರಿಗೆ ಮಣೆ!

ಧ್ರುವ ಜುರೆಲ್ ಭಾರತ ಅಂಡರ್ 19 ತಂಡದ ನಾಯಕ. ಕೊಲೊಂಬೊದಲ್ಲಿ ನಡೆಯಲಿರುವ ಯೂಥ್ ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಧ್ರುವ ಜುರೆಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಿನ ತ್ರಿಕೋನ ಸರಣಿ ಗೆಲುವಿನಲ್ಲಿ ಧ್ರುವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಫೈನಲ್ ಪಂದ್ಯದಲ್ಲಿ 59 ರನ್ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಇದನ್ನೂ ಓದಿ: MS ಧೋನಿ ಭವಿಷ್ಯ ಇನ್ನೂ ಸಸ್ಪೆನ್ಸ್‌!

ಮಗ ಕ್ರಿಕೆಟ್ ಆಟಗಾರನಾಗುವುದು ನಿವೃತ್ತ ಸೈನಿಕ ನೇಮ್ ಸಿಂಗ್ ಜುರೆಲ್‌ಗೆ ಇಷ್ಟವಿರಲಿಲ್ಲ. ಸೈನ್ಯ ಸೇರಿಕೊಳ್ಳುವಂತೆ ಧ್ರುವಗೆ ಹಲವು ಬಾರಿ ಸೂಚಿಸಿದ್ದರು. ಇಷ್ಟೇ ಅಲ್ಲ ಕ್ರಿಕೆಟ್‌ನಲ್ಲಿ ಧ್ರುವ ಸಾಧನೆ ಮಾಡಬಲ್ಲ ಅನ್ನೋ ನಂಬಿಕೆ ತಂದೆಗೆ ಇರಲಿಲ್ಲ. ಆದರೆ ಸದ್ಯ ಧ್ರುವ ಪ್ರದರ್ಶನ ಗಮನಿಸಿರುವ ತಂದೆ ಹೆಚ್ಚು ಖುಷಿಯಲ್ಲಿದ್ದಾರೆ. ನಾನು ದೇಶ ಸೇವೆಗಾಗಿ ಸೈನ್ಯ ಸೇರಿಕೊಂಡೆ, ಮಗ ದೇಶಸೇವೆಗಾಗಿ ಕ್ರಿಕೆಟ್ ಆರಿಸಿಕೊಂಡಿದ್ದಾನೆ ಎಂದಿದ್ದಾರೆ. 
 

Latest Videos
Follow Us:
Download App:
  • android
  • ios