ಕನ್ನಡಿಗನ ದಾಖಲೆ ಮುರಿದ ಡೆಲ್ಲಿ ವೇಗಿ..!

Ishant Sharma Joins Elite List of Kapil Dev
Highlights

ಆಫ್ಘಾನ್ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಸಾಕಷ್ಟು ದಾಖಲೆ ನಿರ್ಮಿಸುತ್ತಿದ್ದಾರೆ. ಮೊದಲು ಧವನ್ ಊಟದ ವಿರಾಮಕ್ಕೂ ಮುನ್ನ ಶತಕ ಸಿಡಿಸಿ ದಾಖಲೆ ಬರೆದರೆ, ಆರ್. ಅಶ್ವಿನ್ ಹಿರಿಯ ವೇಗಿ ಜಹೀರ್ ಖಾನ್[311 ವಿಕೆಟ್] ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದರು. 

ಬೆಂಗಳೂರು[ಜೂ.15]: ಆಫ್ಘಾನ್ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಸಾಕಷ್ಟು ದಾಖಲೆ ನಿರ್ಮಿಸುತ್ತಿದ್ದಾರೆ. ಮೊದಲು ಧವನ್ ಊಟದ ವಿರಾಮಕ್ಕೂ ಮುನ್ನ ಶತಕ ಸಿಡಿಸಿ ದಾಖಲೆ ಬರೆದರೆ, ಆರ್. ಅಶ್ವಿನ್ ಹಿರಿಯ ವೇಗಿ ಜಹೀರ್ ಖಾನ್[311 ವಿಕೆಟ್] ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದರು. 

ಇದೀಗ ಎರಡನೇ ಇನಿಂಗ್ಸ್’ನಲ್ಲಿ ದಾಳಿಗಿಳಿದಿರುವ ಭಾರತದ ಬೌಲರ್’ಗಳು ಮತ್ತೆ ಮಿಂಚುತ್ತಿದ್ದು, ಡೆಲ್ಲಿ ವೇಗಿ ಇಶಾಂತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ರಹಮತ್ ಅವರನ್ನು ಪೆವಿಲಿಯನ್’ಗೆ ಕಳಿಸುವ ಮೂಲಕ ಶರ್ಮಾ ವಿನೂತನ ಸಾಧನೆ ಮಾಡಿದ್ದಾರೆ. ಜಾವಗಲ್ ಎಕ್ಸ್’ಪ್ರೆಸ್ ಖ್ಯಾತಿಯ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ 236 ವಿಕೆಟ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್’ಗಳ ಪಟ್ಟಿಯಲ್ಲಿ ಇಶಾಂತ್ ಶರ್ಮಾ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾದ ರಶೀದ್ ಖಾನ್..!

ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತದ ಪರ ವೇಗದ ಬೌಲಿಂಗ್ ವಿಭಾಗದಲ್ಲಿ ಮಾಜಿ ನಾಯಕ ಕಪಿಲ್ ದೇವ್ 434 ಮೊದಲ ಸ್ಥಾನದಲ್ಲಿದ್ದರೆ, ಜಹೀರ್ ಖಾನ್ 311 ಎರಡನೇ ಸ್ಥಾನದಲ್ಲಿದ್ದಾರೆ.   
ಇದೇವೇಳೆ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್’ನಲ್ಲಿ 100 ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ ನೂರು ವಿಕೆಟ್ ಪಡೆದ ಭಾರತದ 8ನೇ ವೇಗದ ಬೌಲರ್ ಎನಿಸಿಕೊಂಡರು.

ಅನಿಲ್ ಕುಂಬ್ಳೆ ಭಾರತದ ಪರ ಅತಿಹೆಚ್ಚು [619] ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.
 

loader