ಭಾರತ  ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಟೀಮ್ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ನಿರ್ಮಿಸಿದ ರೆಕಾರ್ಡ್ ಏನು? ಇಲ್ಲಿಗದೆ ವಿವರ.

ಬೆಂಗಳೂರು(ಜೂ.15): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿಆರ್ ಅಶ್ವಿನ್ ದಾಖಲೆ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನದ ಪ್ರಮುಖ 4 ವಿಕೆಟ್ ಕಬಳಿಸೋ ಮೂಲಕ ಆರ್ ಅಶ್ವಿನ್, ಭಾರತದ ಮಾಜಿ ವೇಗಿ ಜಹೀರ್ ಖಾನ್ ದಾಖಲೆ ಮುರಿದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆರ್ ಅಶ್ವಿನ್ ಓಟ್ಟು 314 ವಿಕೆಟ್ ಕಬಳಿಸೋ ಮೂಲಕ , ಗರಿಷ್ಠ ವಿಕೆಟ್ ಕಬಳಿಸಿದ 4ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಜಹೀರ್ ಖಾನ್ 311 ವಿಕೆಟ್ ಕಬಳಿಸಿದ್ದಾರೆ. ಇದೀಗ ಅಶ್ವಿನ್ 314 ವಿಕೆಟ್ ಕಬಳಿಸೋ ಮೂಲಕ ಜಹೀರ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಅಸ್ಗರ್ ಸ್ಟಾನಿಕ್‌ಜೈ ವಿಕೆಟ್ ಕಬಳಿಸೋ ಮೂಲಕ ಅಶ್ವಿನ್, ಜಹೀರ್ ದಾಖಲೆಯನ್ನ ಸರಿಗಟ್ಟಿದ್ದರು. ಬಳಿಕ ಹಶ್ಮತುಲ್ಲಾ ಶಾಹಿದಿ, ಯಾಮಿನ್ ಅಹಮ್ಮದ್ಜೈ ಹಾಗೂ ಮೊಹಮ್ಮದ್ ನಬಿ ವಿಕೆಟ್ ಕಬಳಿಸಿ ಜಹೀರ್ ದಾಖಲೆಯನ್ನ ಮುರಿದರು.

ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯರು

ಬೌಲರ್ಪಂದ್ಯವಿಕೆಟ್
ಅನಿಲ್ ಕುಂಬ್ಳೆ132619
ಕಪಿಲ್ ದೇವ್131434
ಹರ್ಭಜನ್ ಸಿಂಗ್103417
ಆರ್ ಅಶ್ವಿನ್58314
ಜಹೀರ್ ಖಾನ್92311