Asianet Suvarna News Asianet Suvarna News

ಸಾನಿಯಾ ಮಿರ್ಜಾ ಮೊಹಮ್ಮದ್ ಶಮಿ ಮದ್ವೆ ಆಗ್ತಾರಾ? ಮಗಳ 2ನೇ ಮದ್ವೆ ಬಗ್ಗೆ ಮೌನ ಮುರಿದ ಸಾನಿಯಾ ತಂದೆ

ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಇದಕ್ಕೆ  ಈಗ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಪ್ರತಿಕ್ರಿಯಿಸಿದ್ದು, ಅವರು ಏನು ಹೇಳಿದ್ದಾರೆ ಎಂಬ ಡಿಟೇಲ್ ಇಲ್ಲಿದೆ. 

Is Tennis Icon Sania Mirza marrying cricketer Mohammed Shami, father Imran Mirza broke his silence about his daughters second marriage akb
Author
First Published Jun 21, 2024, 4:47 PM IST

ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಭಾರತೀಯ ಕ್ರೀಡಾಲೋಕ ಕಳೆದೆರಡು ದಶಕಗಳಿಂದ ಕಂಡಿರುವಂತಹ ಯಶಸ್ವಿ ಸ್ಪೋಟ್ಸ್‌ ಐಕಾನ್‌ಗಳು. ಸಾನಿಯಾ ಭಾರತದ ಮಹಿಳಾ ಟೆನ್ನಿಸ್ ಲೋಕದ ಅದ್ಭುತ ತಾರೆಯಾಗಿದ್ದರೆ ಇತ್ತ ಮೊಹಮ್ಮದ್ ಶಮಿ ಕ್ರಿಕೆಟ್ ಚಾಂಪಿಯನ್ ಭಾರತದ ಫಾಸ್ಟ್ ಬೌಲರ್ ತಮ್ಮ ಬೌಲಿಂಗ್ ಕೌಶಲ್ಯದಿಂದ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ಗೇರಿಸಿದವರು. ಆದರೆ ಇವರಿಬ್ಬರು ಕೂಡ ಕ್ರೀಡಾ ಜೀವನದಲ್ಲಿ ಯಶಸ್ವಿಯಾಗಿದ್ದರೂ ಸಾಂಸಾರಿಕ ಜೀವನದಲ್ಲಿ ಮೋಸಕ್ಕೊಳಗಾದವರು, ಜೊತೆಗೆ ವಿಚ್ಛೇದನವನ್ನೂ ಪಡೆದವರು. ಒಂದೇ ಸಮುದಾಯಕ್ಕೆ ಸೇರಿದವರು. ಹೀಗಾಗಿ ಕ್ರೀಡಾಭಿಮಾನಿಗಳು ಇವರಿಬ್ಬರು ಮದುವೆಯಾಗುತ್ತಾರೆ. ಇವರಿಬ್ಬರೂ ಮದುವೆಯಾಗಬೇಕು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಮೀಮ್ಸ್ ಪೋಸ್ಟ್ ಮಾಡುತ್ತಿದ್ದರು. ಅಲ್ಲದೇ ಇವರಿಬ್ಬರು ಮದ್ವೆಯಾಗುತ್ತಾರೆ ಎಂಬ ಊಹಾಪೋಹಾವೂ ಕೂಡ ಹಬ್ಬಿತ್ತು. 

ಸಾನಿಯಾ ಮಿರ್ಜಾ ಅವರು 2010ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರನ್ನು ಹೈದರಬಾದ್‌ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಮದ್ವೆಯಾಗಿದ್ದರೂ ಈ ವರ್ಷದ ಆರಂಭದಲ್ಲಿ ಇಬ್ಬರು ವಿಚ್ಛೇದನ ಪಡೆಯುವ ಮೂಲಕ ತಮ್ಮ 14 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದಿದ್ದರು.  ಪಾಕಿಸ್ತಾನಿ ಟಿವಿ ತಾರೆ ಸಾನಾ ಜಾವೇದ್ ಅವರನ್ನು ಶೋಯೇಬ್ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿವಾಹದ ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ ವಿಚ್ಛೇದನವಾಗಿರುವುದು ಬೆಳಕಿಗೆ ಬಂದಿತ್ತು. ಇತ್ತ ಮೊಹಮ್ಮದ್ ಶಮಿ ಕೂಡ ತನ್ನ ಪತ್ನಿ ಹಸೀನಾ ಜಹಾನ್‌ರಿಂದ ವಿಚ್ಚೇದನ ಪಡೆದಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರು ಮದ್ವೆಯಾದರೆ ಚೆನ್ನಾಗಿರುತ್ತದೆ ಎಂಬ ಊಹಾಪೋಹಾಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

'ನಾನು ಇನ್ನಷ್ಟೇ ಪ್ರೀತಿ ಹುಡುಕಬೇಕು': ಮಲಿಕ್ ಜತೆಗಿನ ವಿಚ್ಛೇದನದ ಬಳಿಕ ಸಾನಿಯಾ ಮಿರ್ಜಾ ಅಚ್ಚರಿ ಮಾತು..!

ಆದರೆ ಜನರ ಕುತೂಹಲ ಹಾಗೂ ಊಹಾಪೋಹಾಕ್ಕೆ ಈಗ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಪ್ರತಿಕ್ರಿಯಿಸಿದ್ದು, ಅವರು ಏನು ಹೇಳಿದ್ದಾರೆ ಎಂಬ ಡಿಟೇಲ್ ಇಲ್ಲಿದೆ. ಅಂಗ್ಲ ಮಾಧ್ಯಮವೊಂದು ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಅವರ ಬಳಿ ಮಗಳ 2ನೇ ಮದ್ವೆ ಬಗ್ಗೆ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಇರ್ಮಾನ್ ಮಿರ್ಜಾ, ಈ ವಿಚಾರಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಆಕೆ ಅವನನ್ನು ಒಮ್ಮೆಯೂ ಭೇಟಿ ಕೂಡ ಮಾಡಿಲ್ಲ, ಈ ಸುದ್ದಿಗಳೆಲ್ಲವೂ ರಬ್ಬಿಶ್ ಎಂದು ಹೇಳಿದ್ದಾರೆ. ಇತ್ತೀಚೆಗೆ ಸಾನಿಯಾ ಮಿರ್ಜಾ ಮುಸ್ಲಿಮರ ಪವಿತ್ರ ಹಜ್ ಯಾತ್ರೆಯನ್ನು ಕೈಗೊಂಡಿದ್ದರು.  ವೃತ್ತಿಪರ ಟೆನ್ನಿಸ್‌ನಿಂದಲೂ ನಿವೃತ್ತಿ ಪಡೆದಿರುವ ಸಾನಿಯಾ ಇತ್ತೀಚೆಗೆ ಪ್ರತಿಷ್ಠಿತ ಫ್ರೆಂಚ್ ಓಪನ್ 2024 ಕ್ಕೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿವರ್ತನೆಯ ಅನುಭವಕ್ಕಾಗಿ ಸಜ್ಜಾಗುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದು, ಉತ್ತಮ ಮಾನವಳಾಗಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು.

ಸಾನಿಯಾ ಮಿರ್ಜಾಗೆ ಮರು ಮದುವೆ: ಅರಬ್​ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್​ ನಟ ಹೇಳಿದ್ದೇನು?

Latest Videos
Follow Us:
Download App:
  • android
  • ios