ನವದೆಹಲಿ[ಮಾ.18]: ರಾಷ್ಟ್ರೀಯ ದಾಖಲೆ ವೀರ ಕೆ.ಟಿ.ಇರ್ಫಾನ್‌, ಭಾನುವಾರ ಭಾರತದಿಂದ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಅಥ್ಲೀಟ್‌ ಎನ್ನುವ ಹಿರಿಮೆಗೆ ಪಾತ್ರರಾದರು. ಜಪಾನ್‌ನ ನೋಮಿಯಲ್ಲಿ ನಡೆದ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ, ಇರ್ಫಾನ್‌ ಈ ಸಾಧನೆಗೈದರು.

29 ವರ್ಷದ ಇರ್ಫಾನ್‌, 20 ಕಿ.ಮೀ. ದೂರವನ್ನು 1 ಗಂಟೆ 20 ನಿಮಿಷ 57 ಸೆಕೆಂಡ್‌ಗಳಲ್ಲಿ ಮುಕ್ತಾಯಗೊಳಿಸಿದರು. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 1 ಗಂಟೆ 21 ನಿಮಿಷಗಳ ಸಮಯವನ್ನು ನಿಗದಿಪಡಿಸಿಲಾಗಿದೆ.

2020ರ ಟೋಕಿಯೋ ಒಲಿಂಪಿಕ್ಸ್ ಅಧಿಕೃತ ಲಾಂಛನ ಅನಾವರಣ

ಒಲಿಂಪಿಕ್ಸ್‌ನ ನಡಿಗೆ ಹಾಗೂ ಮ್ಯಾರಥಾನ್‌ ಸ್ಪರ್ಧೆಗಳಿಗೆ ಈ ವರ್ಷ ಜ.1ರಿಂದ ಅರ್ಹತಾ ಅವಧಿ ಆರಂಭಗೊಂಡಿದ್ದು, ಮೇ 31, 2020ರ ವರೆಗೂ ಅವಕಾಶವಿರಲಿದೆ. ಅಥ್ಲೆಟಿಕ್ಸ್‌ನ ಇನ್ನುಳಿದ ಸ್ಪರ್ಧೆಗಳ ಅರ್ಹತಾ ಅವಧಿ ಈ ವರ್ಷ ಮೇ 1ರಿಂದ 2020ರ ಜೂ.29ರ ವರೆಗೂ ಇರಲಿದೆ.

ಇ-ತ್ಯಾಜ್ಯದಿಂದ ಸಿದ್ಧಗೊಳ್ಳುತ್ತಿದೆ ಟೋಕಿಯೋ ಒಲಿಂಪಿಕ್ಸ್ ಪದಕ!

ಈ ವರೆಗೂ ಭಾರತದ ಇನ್ಯಾವುದೇ ಅಥ್ಲೀಟ್‌ ಸಹ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಇರ್ಫಾನ್‌ 10ನೇ ಸ್ಥಾನ ಪಡೆದಿದ್ದರು. 2018ರ ಕಾಮನ್‌ವೆಲ್ತ್‌ ಗೇಮ್ಸ್‌ ವೇಳೆ ಚುಚ್ಚುಮದ್ದು ಬಳಸಿದ ಕಾರಣ ಅವರನ್ನು ಆಸ್ಪ್ರೇಲಿಯಾದಿಂದ ಭಾರತಕ್ಕೆ ಕಳುಹಿಸಲಾಗಿತ್ತು. 2018ರ ಏಷ್ಯನ್‌ ಗೇಮ್ಸ್‌ ವೇಳೆ ನಿಯಮ ಉಲ್ಲಂಘಿಸಿದ ಕಾರಣ, ಇರ್ಫಾನ್‌ ಅನರ್ಹಗೊಂಡು ಸ್ಪರ್ಧೆಯಿಂದ ಹೊರಬಿದ್ದಿದ್ದರು.