ಕಳೆದ ಜೂನ್‌'ನಲ್ಲಿ ಐರ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡಗಳಿಗೆ ಐಸಿಸಿ ಪೂರ್ಣ ಸದಸ್ಯತ್ವ ನೀಡಿತ್ತು.

ಡಬ್ಲಿನ್(ಅ13): ಇತ್ತೀಚೇಗಷ್ಟೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌'ಗೆ ಮಾನ್ಯತೆ ಪಡೆದಿದ್ದ ಐರ್ಲೆಂಡ್ ತಂಡ, 2018ರ ಮೇ ತಿಂಗಳಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಜೂನ್‌'ನಲ್ಲಿ ಐರ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡಗಳಿಗೆ ಐಸಿಸಿ ಪೂರ್ಣ ಸದಸ್ಯತ್ವ ನೀಡಿತ್ತು. ಮುಂದಿನ ವಾರ ಆಕ್ಲೆಂಡ್‌'ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಐರ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡಗಳು ಭಾಗವಹಿಸಲಿವೆ. ಐರ್ಲೆಂಡ್ ನೆಲದಲ್ಲಿ ಪಾಕಿಸ್ತಾನ ತಂಡ ಟೆಸ್ಟ್ ಪಂದ್ಯವನ್ನಾಡುತ್ತಿರುವುದು ನಿಜಕ್ಕೂ ಹೆಚ್ಚಿನ ಉತ್ಸಾಹ ನೀಡಿದೆ ಎಂದು ಐರ್ಲೆಂಡ್ ಕ್ರಿಕೆಟ್ ಮಂಡಳಿಯ ಸಿಇಒ ವಾರೆನ್ ಡಿಟ್ರೊಮ್ ಹೇಳಿದ್ದಾರೆ.

ಪಾಕಿಸ್ತಾನ, ಐರ್ಲೆಂಡ್ ಎದುರು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಳಿಕ ಪಾಕಿಸ್ತಾನ ತಂಡ, ಇಂಗ್ಲೆಂಡ್ ವಿರುದ್ಧದ ಸರಣಿಯನ್ನಾಡಲು ತೆರಳಲಿದೆ.