Published : Dec 18 2018, 02:28 PM IST| Updated : Dec 18 2018, 08:45 PM IST
Share this Liveblog
FB
TW
Linkdin
Whatsapp
#IPLAuction2019: ಅಬ್ಬಾ..! ಕೊನೆಗೂ ಹರಾಜಾದ ಯುವರಾಜ್ ಸಿಂಗ್
ಸಾರಾಂಶ
ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, 351 ಆಟಗಾರರು ಹರಾಜಿನಲ್ಲಿ ಲಭ್ಯವಿದ್ದಾರೆ. ಇದರಲ್ಲಿ 8 ಫ್ರಾಂಚೈಸಿಗಳು 70 ಆಟಗಾರರನ್ನು ಖರೀದಿಸಬಹುದಾಗಿದೆ. ಯುವರಾಜ್ ಸಿಂಗ್, ಡೇಲ್ ಸ್ಟೇನ್, ಬ್ರೆಂಡನ್ ಮೆಕಲಂ ಸೇರಿದಂತೆ ದಿಗ್ಗಜ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
08:44 PM (IST) Dec 18
ಅಬ್ಬಾ..! ಕೊನೆಗೂ ಹರಾಜಾದ ಯುವರಾಜ್ ಸಿಂಗ್
ಅಬ್ಬಾ..! ಕೊನೆಗೂ ಹರಾಜಾದ ಯುವರಾಜ್ ಸಿಂಗ್
ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್’ಮನ್ ಯುವರಾಜ್ ಸಿಂಗ್ ಎರಡನೇ ಹಂತದ ಹರಾಜಿನಲ್ಲಿ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಯುವರಾಜ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಒಂದು ಕೋಟಿ ರುಪಾಯಿ ನೀಡಿ ಖರೀದಿಸಿದೆ. ಈ ಮೊದಲು ಯುವರಾಜ್ ಸಿಂಗ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದರು.
ಮೊದಲ ಸುತ್ತಿನ ಹರಾಜಿನಲ್ಲಿ ಯಾವೊಬ್ಬ ಫ್ರಾಂಚೈಸಿಯೂ ಯುವಿಯನ್ನು ಖರೀದಿಸಲು ಮನಸು ಮಾಡಿರಲಿಲ್ಲ.
08:16 PM (IST) Dec 18
21 ವರ್ಷದ ವಿಂಡೀಸ್ ವೇಗಿ ರಾಜಸ್ಥಾನದ ಪಾಲು
21 ವರ್ಷದ ವಿಂಡಿಸ್ ವೇಗಿ ರಾಜಸ್ಥಾನದ ಪಾಲು
ವೆಸ್ಟ್ ಇಂಡೀಸ್ ಕ್ರಿಕೆಟ್’ನ 21 ವರ್ಷದ ವೇಗದ ಬೌಲರ್ ಓಶಾನೆ ಥಾಮಸ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 1.1 ಕೋಟಿ ನೀಡಿ ಖರೀದಿಸಿದೆ.
07:05 PM (IST) Dec 18
ಕೆಕೆಆರ್ ಪಾಲಾದ ಕಿವೀಸ್ ವೇಗದ ಬೌಲರ್
ಕೆಕೆಆರ್ ಪಾಲಾದ ಕಿವೀಸ್ ವೇಗದ ಬೌಲರ್
ನ್ಯೂಜಿಲೆಂಡ್ ತಂಡದ ಬಲಗೈ ಮಧ್ಯಮ ವೇಗದ ಬೌಲರ್ ಲೂಕಿ ಫರ್ಗ್ಯೂಸನ್ ಅವರನ್ನು ಕೋಲ್ಕತ ನೈಟ್’ರೈಡರ್ಸ್ ತಂಡವು 1.6 ಕೋಟಿ ರುಪಾಯಿ ನೀಡಿ ಖರೀದಿಸಿದೆ.
06:51 PM (IST) Dec 18
ಕನ್ನಡದ ಬೌಲರ್’ಗಳು ಅನ್’ಸೋಲ್ಡ್..!
ಕನ್ನಡದ ಬೌಲರ್’ಗಳು ಅನ್’ಸೋಲ್ಡ್..!
ಕರ್ನಾಟಕದ ಬೌಲರ್’ಗಳಾದ ವಿನಯ್ ಕುಮಾರ್ ಆರ್, ಅಭಿಮನ್ಯು ಮಿಥುನ್, ಕೆ.ಸಿ ಕಾರ್ಯಪ್ಪ, ಜೆ ಸುಚಿತ್ ಮೊದಲ ಸುತ್ತಿನ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ.
06:36 PM (IST) Dec 18
ಇಂಗ್ಲೆಂಡ್ ಯುವ ವೇಗಿ ಸ್ಯಾಮ್ ಕುರ್ರಾನ್’ಗೆ ಜಾಕ್’ಪಾಟ್
ಐಪಿಎಲ್ ಹರಾಜು 2019: 7.2 ಕೋಟಿಗೆ ಸ್ಯಾಮ್ ಕುರ್ರನ್ ಖರೀದಿಸಿದ ಪಂಜಾಬ್
ಇಂಗ್ಲೆಂಡ್ ತಂಡದ ಮಾರಕ ವೇಗಿ, ಹಾಗೂ ಯುವ ಕ್ರಿಕೆಟಿಗ ಸ್ಯಾಮ್ ಕುರ್ರಾನ್ ಅವರನ್ನು 7.2 ಕೋಟಿ ರುಪಾಯಿ ನೀಡಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಖರೀದಿಸಿದೆ.
06:25 PM (IST) Dec 18
ಐಪಿಎಲ್ ಹರಾಜು 2019: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್’ಮನ್ ಡೆಲ್ಲಿ ತೆಕ್ಕೆಗೆ
ಐಪಿಎಲ್ ಹರಾಜು 2019: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್’ಮನ್ ಡೆಲ್ಲಿ ತೆಕ್ಕೆಗೆ
ದಕ್ಷಿಣ ಆಫ್ರಿಕಾದ ಎಡಗೈ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಇನ್’ಗ್ರಾಂ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 6.4 ಕೋಟಿ ನೀಡಿ ಖರೀದಿಸಿದೆ.
06:12 PM (IST) Dec 18
2 ಕೋಟಿ ನೀಡಿ ವೇಗದ ಬೌಲರ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
2 ಕೋಟಿ ನೀಡಿ ವೇಗದ ಬೌಲರ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
ದೇಶಿ ಕ್ರಿಕೆಟ್’ನಲ್ಲಿ ಮಿಂಚಿನ ಪ್ರದರ್ಶನ ತೋರಿರುವ ರಾಜಸ್ಥಾನ ಮೂಲದ ನಾತು ಸಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ಕೋಟಿ ನೀಡಿ ಖರೀದಿಸಿದೆ.
05:58 PM (IST) Dec 18
ದೇಶಿ ಕ್ರಿಕೆಟ್’ನಲ್ಲಿ ಮಿಂಚಿದ ಆಲ್ರೌಂಡರ್ 8.4 ಕೋಟಿಗೆ ಪಂಜಾಬ್ ತೆಕ್ಕೆಗೆ
ತಮಿಳುನಾಡು ಪ್ರೀಮಿಯರ್ ಲೀಗ್’ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ವರುಣ್ ಚಕ್ರವರ್ತಿ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ಬರೋಬ್ಬರಿ 8.4 ಕೋಟಿ ನೀಡಿ ಖರೀದಿಸಿದೆ. ಈ ಮೂಲಕ ಜಯದೇವ್ ಉನಾದ್ಕಟ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
05:50 PM (IST) Dec 18
ಶಿವಂ ದುಬೈ RCB ಪಾಲು
ಮುಂಬೈ ಮೂಲದ ಸ್ಫೋಟಕ ಬ್ಯಾಟ್ಸ್’ಮನ್ ಶಿವಂ ದುಬೈ ಅವರನ್ನು 5 ಕೋಟಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.
ಅದೇ ರೀತಿ ಇತ್ತೀಚೆಗಷ್ಟೇ ರಣಜಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ದೇವದತ್ ಪಡಿಕಲ್ ಅವರನ್ನು 20 ಲಕ್ಷ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.
05:03 PM (IST) Dec 18
ಐಪಿಎಲ್ ಹರಾಜು 2019: ವರುಣ್ ಆ್ಯರೋನ್ 2.4 ಕೋಟಿಗೆ ರಾಜಸ್ಥಾನ ಪಾಲು
ಐಪಿಎಲ್ ಹರಾಜು 2019: ವರುಣ್ ಆ್ಯರೋನ್ 2.4 ಕೋಟಿಗೆ ರಾಜಸ್ಥಾನ ಪಾಲು
04:55 PM (IST) Dec 18
ಐಪಿಎಲ್ ಹರಾಜು 2019: 4.8 ಕೋಟಿಗೆ ಪಂಜಾಬ್ ಪಾಲಾದ ಮೊಹಮ್ಮದ್ ಶಮಿ
ಐಪಿಎಲ್ ಹರಾಜು 2019: 4.8 ಕೋಟಿಗೆ ಪಂಜಾಬ್ ಪಾಲಾದ ಮೊಹಮ್ಮದ್ ಶಮಿ
04:48 PM (IST) Dec 18
ಐಪಿಎಲ್ ಹರಾಜು 2019: 2 ಕೋಟಿ ಮೊತ್ತಕ್ಕೆ ಲಸಿತ್ ಮಲಿಂಗಾ ಮುಂಬೈ ಪಾಲು
ಐಪಿಎಲ್ ಹರಾಜು 2019: 2 ಕೋಟಿ ಮೊತ್ತಕ್ಕೆ ಲಸಿತ್ ಮಲಿಂಗಾ ಮುಂಬೈ ಪಾಲು