ನವದೆಹಲಿ[ಆ.10]: ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿ ಒಂದು ವಾರ ಮುಗಿಯುವಷ್ಟರಲ್ಲೇ ಮತ್ತೆ ಐಪಿಎಲ್ ತಂಡ ಕೂಡಿಕೊಂಡಿದ್ದಾರೆ.

ಹೌದು, ಆಟಗಾರನಾಗಿ ಅಲ್ಲ, ಬದಲಾಗಿ ಕೋಚ್ ಆಗಿ ಐಪಿಎಲ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಜಿ ನಾಯಕ ಬ್ರೆಂಡನ್‌ ಮೆಕ್ಕಲಂ ಐಪಿಎಲ್‌ನ ಕೋಲ್ಕತಾ ನೈಟ್‌ ರೈಡ​ರ್ಸ್ (ಕೆಕೆಆರ್‌) ತಂಡದ ಸಹಾಯಕ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 

ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ RCB ಮಾಜಿ ಕ್ರಿಕೆಟಿಗ..!

ಇತ್ತೀಚೆಗಷ್ಟೇ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಶಾರುಖ್‌ ಖಾನ್‌ ಮಾಲೀಕತ್ವದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ತಂಡ ಟ್ರಿನಿಬ್ಯಾಗೋ ನೈಟ್‌ ರೈಡ​ರ್ಸ್ ತಂಡದ ಪ್ರಧಾನ ಕೋಚ್‌ ಆಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 

KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!

ಈ ಎರಡೂ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಸ್ಪ್ರೇಲಿಯಾದ ಮಾಜಿ ಆಟಗಾರ ಸೈಮನ್‌ ಕ್ಯಾಟಿಚ್‌ ಬದಲಿಗೆ ಮೆಕ್ಕಲಂರನ್ನು ಮಾಲೀಕರು ನೇಮಿಸಿದ್ದಾರೆ. 5 ಆವೃತ್ತಿಗಳಲ್ಲಿ ಕೆಕೆಆರ್‌ ಪರ ಆಡಿದ್ದ ಮೆಕ್ಕಲಂ, 2009ರಲ್ಲಿ ತಂಡವನ್ನು ಮುನ್ನಡೆಸಿದ್ದರು. 2008ರಲ್ಲಿ ಐಪಿಎಲ್‌ನ ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ವಿರುದ್ಧ 158 ರನ್‌ ಚಚ್ಚಿ ದಾಖಲೆ ಬರೆದಿದ್ದರು.