ಐಪಿಎಲ್ ಟೂರ್ನಿ ಹರಾಜಿಗೆ ಕ್ಷಣಗಣನೆ ಆರಂಭಗೊಂಡಿದೆ. ಕೆಲ ಹೊತ್ತಲ್ಲೇ ಹರಾಜು ನಡೆಯಲಿದೆ. ಆದರೆ ಹರಾಜಿಗೂ ಮೊದಲೇ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ.

ಮುಂಬೈ(ಡಿ.18): ಐಪಿಎಲ್ ಹರಾಜಿಗೆ ಕೆಲ ಗಂಟೆಗಳು ಮಾತ್ರ ಬಾಕಿ. 8 ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸಜ್ಜಾಗಿದೆ. ಆದರೆ ಹರಾಜಿಗೂ ಮೊದಲೇ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್, ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಮುಂಬೈ ತಂಡದಲ್ಲಿ ಜಹೀರ್ ಡೈರೆಕ್ಟರ್ ಆಫ್ ಕ್ರಿಕೆಟ್ ಆಪರೇಶನ್ ಜವಾಬ್ದಾರಿಯನ್ನ ಜಹೀರ್ ನಿರ್ವಹಿಸಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ಹಾಗೂ ಮೆಂಟರ್ ಆಗಿದ್ದ ಜಹೀರ್ ಖಾನ್ 2018ರಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮುಂಬೈ ಇಂಡಿಯನ್ಸ್ ತಂಡದ ಸ್ಟಾಫ್ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ಮಹೇಲಾ ಜಯವರ್ದನೆ, ಶೇನ್ ಬಾನ್, ರಾಬಿನ್ ಸಿಂಗ್ ಜೊತೆ ಇದೀಗ ಜಹೀರ್ ಖಾನ್ ಕೂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ:ಐಪಿಎಲ್ ಆಟಗಾರರ ಹರಾಜು; ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ

ಹರಾಜಿಗೂ ಮೊದಲೇ ಮುಂಬೈ ಇಂಡಿಯನ್ಸ್ ಸೇರಿಕೊಂಡ ಜಹೀರ್ ಖಾನ್ ಇನ್ನು ಕೆಲ ಹೊತ್ತಲ್ಲೇ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಮುಂಬೈ ಪರ ಆಟಗಾರರನ್ನ ಖರೀದಿಸಲಿದ್ದಾರೆ. ಮುಂಬೈ ಇಂಡಿಯನ್ಸ್ ಈ ಹರಾಜಿನಲ್ಲಿ 7 ಆಟಗಾರರನ್ನ ಖರೀದಿಸಲಿದೆ. ಮುಂಬೈ ಬಳಿ 11.5 ಕೋಟಿ ಬಾಕಿ ಉಳಿದಿದೆ.

ಇದನ್ನೂ ಓದಿ: ಪರ್ತ್ ಟೆಸ್ಟ್: ಆಸಿಸ್’ಗೆ ಶರಣಾದ ಟೀಂ ಇಂಡಿಯಾ