Asianet Suvarna News Asianet Suvarna News

ಐಪಿಎಲ್ ಆಟಗಾರರ ಹರಾಜು; ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅತಿಹೆಚ್ಚು, ₹36.20 ಕೋಟಿ ಮೊತ್ತ ಹೊಂದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ₹25.50 ಕೋಟಿ, ರಾಜಸ್ಥಾನ ₹20.95 ಕೋಟಿ, ಆರ್‌ಸಿಬಿ ₹18.15 ಕೋಟಿ, ಕೆಕೆಆರ್ ₹15.20 ಕೋಟಿ, ಮುಂಬೈ ₹11.15 ಕೋಟಿ, ಸನ್‌ರೈಸರ್ಸ್‌ ₹9.70 ಕೋಟಿ, ಸಿಎಸ್‌ಕೆ ₹8.40 ಕೋಟಿ ಮೊತ್ತವನ್ನು ಹೊಂದಿವೆ. 

Cricket IPL Auction 2019 Countdown Start
Author
Jaipur, First Published Dec 18, 2018, 9:49 AM IST

ಜೈಪುರ[ಡಿ.18]: ಐಪಿಎಲ್ 12ನೇ ಆವೃತ್ತಿಯ ಆಟಗಾರರ ಹರಾಜಿಗೆ ವೇದಿಕೆ ಸಿದ್ಧಗೊಂಡಿದೆ. ಹರಾಜಿನಲ್ಲಿ ಒಟ್ಟು 350 ಕ್ರಿಕೆಟಿಗರು ತಮ್ಮ ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. 8 ಫ್ರಾಂಚೈಸಿಗಳು ಒಟ್ಟು 70 ಆಟಗಾರರನ್ನು ಖರೀದಿಸಲಿವೆ. ಇದರಲ್ಲಿ 50 ಭಾರತೀಯ ಹಾಗೂ ಉಳಿದ 20 ವಿದೇಶಿ ಆಟಗಾರರಿದ್ದಾರೆ.

ಐಪಿಎಲ್ ಹರಾಜು: ಕೊನೆ ಕ್ಷಣದಲ್ಲಿ ನಾಲ್ವರು ಸೇರ್ಪಡೆ-ಪಟ್ಟಿ 350ಕ್ಕೆ ಏರಿಕೆ!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅತಿಹೆಚ್ಚು, ₹36.20 ಕೋಟಿ ಮೊತ್ತ ಹೊಂದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ₹25.50 ಕೋಟಿ, ರಾಜಸ್ಥಾನ ₹20.95 ಕೋಟಿ, ಆರ್‌ಸಿಬಿ ₹18.15 ಕೋಟಿ, ಕೆಕೆಆರ್ ₹15.20 ಕೋಟಿ, ಮುಂಬೈ ₹11.15 ಕೋಟಿ, ಸನ್‌ರೈಸರ್ಸ್‌ ₹9.70 ಕೋಟಿ, ಸಿಎಸ್‌ಕೆ ₹8.40 ಕೋಟಿ ಮೊತ್ತವನ್ನು ಹೊಂದಿವೆ.

ಐಪಿಎಲ್ 2019: ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಹೀಗಿದೆ!

ಈ ಬಾರಿ 9 ಆಟಗಾರರು ಮಾತ್ರ ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಇದರಲ್ಲಿ ಒಬ್ಬ ಭಾರತೀಯರು ಇಲ್ಲ. ಭಾರತ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ, ಇಶಾಂತ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಯುವರಾಜ್ ಖರೀದಿಯಾಗದೇ ಉಳಿಯುವ ಭೀತಿಯಲ್ಲಿದ್ದಾರೆ.

Follow Us:
Download App:
  • android
  • ios