ಕೋಲ್ಕತಾ(ಏ.19): 12ನೇ  ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಮೂಲಕ ಅಬ್ಬರಿಸಿದ್ದಾರೆ. 7 ಪಂದ್ಯದ ಸೋಲಿನಿಂದ ಹತಾಶೆಗೊಂಡಿದ್ದ ಅಭಿಮಾನಿಗಳು ಇದೀಗ ಫುಲ್ ಖುಷ್ ಆಗಿದ್ದಾರೆ.  ಕೊಹ್ಲಿ 58 ಎಸೆತದಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 100 ರನ್ ಸಿಡಿಸಿದರು.

ಇದನ್ನೂ ಓದಿ:  IPL 2019: ಶತಕ ಸಿಡಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ!

ಐಪಿಎಲ್ ಕ್ರಿಕೆಟ್‌ನಲ್ಲಿ ಕೊಹ್ಲಿ 5ನೇ ಶತಕ ದಾಖಲಿಸಿದ್ದಾರೆ. ಈ ಆೃತ್ತಿಯಲ್ಲಿ ಮೊದಲ ಶತಕ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರ ಪೈಕಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 6 ಶತಕ ಸಿಡಿಸಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕೊಹ್ಲಿ ಹಾಗೂ RCB ಪ್ರದರ್ಶನಕ್ಕೆ ಎಬಿ ಡಿವಿಲಿಯರ್ಸ್, ಇರ್ಫಾನ್ ಪಠಾಣ್, ಮಾಜಿ ಕ್ರಿಕೆಟಿಗರು ಹಾಗೂ  ಟ್ವಿಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.