ಕೋಲ್ಕತಾ(ಏ.19): 12ನೇ ಆವೃತ್ತಿ ಐಪಿಎಲ್ ಟೂರ್ನಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಹಿಗಿಂತ ಹೆಚ್ಚು ಕಹಿಯನ್ನೇ ನೀಡಿದೆ. ಆದರೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಸಿಡಿಸೋ ಮೂಲಕ ಹೊಸ ಇನ್ನಿಂಗ್ಸ್ ಶುರುಮಾಡಿದ್ದಾರೆ. ಇಷ್ಟೇ ಅಲ್ಲ ಶತಕದ ಮೂಲಕ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: IPL 2019: ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿ- KKRಗೆ 214 ರನ್ ಗುರಿ

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಅಬ್ಬರಿಸಿದ ಕೊಹ್ಲಿ 57 ಎಸೆತದಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಮೂಲರ ಶತಕ ಪೂರೈಸಿದರು. ಮರು ಎಸೆತದಲ್ಲೇ ಕೊಹ್ಲಿ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. 2016ರ ಬಳಿಕ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 5ನೇ ಶತಕ ದಾಖಲಿಸಿದರು.ಇಷ್ಟೇ ಅಲ್ಲ ಗರಿಷ್ಠ ಐಪಿಎಲ್ ಸೆಂಚುರಿ ಸಾಧಕರಲ್ಲಿ ಕೊಹ್ಲಿ 2ನೇ ಸ್ಥಾದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 6 ಶತಕ ದಾಖಲಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದಿಂದ ಕಡೆಗಣನೆ- ವಿದೇಶಿ ಕ್ರಿಕೆಟ್‌ನತ್ತ ರಹಾನೆ!

ಕೆಕೆಆರ್ ವಿರುದ್ಧದ ಅಂತಿಮ ಮೂರೂ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಅಬ್ಬರಿಸಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 49 ಎಸೆತದಲ್ಲಿ 84 ರನ್ ಸಿಡಿಸಿದ್ದರು. ಇನ್ನು 2018ರ ಅಂತಿಮ ಪಂದ್ಯದಲ್ಲಿ 44 ಎಸೆತದಲ್ಲಿ ಅಜೇಯ 68 ರನ್ ಸಿಡಿಸಿದ್ದಾರೆ. 

ವಿರಾಟ್ ಕೊಹ್ಲಿ ಸೆಂಚುರಿ ಲಿಸ್ಟ್:
100 vs ಗುಜರಾತ್ ಲಯನ್ಸ್ (2016)
108 vs ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್(2016)
109 vs ಗುಜರಾತ್ ಲಯನ್ಸ್(2016)
113 vs ಕಿಂಗ್ಸ್ XI ಪಂಜಾಬ್(2016)
100 vs ಕೋಲ್ಕತಾ ನೈಟ್ ರೈಡರ್ಸ್(2019)