ಕೋಲ್ಕತಾ(ಮಾ.24): 12ನೇ ಆವೃತ್ತಿಯ ಮೊದಲ ಪಂದ್ಯದ ಅಬ್ಬರದ ಬ್ಯಾಟಿಂಗ್ ಇಲ್ಲದೆ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿತ್ತು. ಆದರೆ ಸೂಪರ್ ಸಂಡೆಯ ಮೊದಲ ಪಂದ್ಯವೇ ರನ್ ಬರ ನೀಗಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಅಬ್ಬರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ 3 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿದೆ. ಈ ಮೂಲಕ KKR ಗೆಲುವಿಗೆ 182 ರನ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಐಪಿಎಲ್‌: RCB ಬೆಂಗಳೂರು ಪಂದ್ಯಕ್ಕೆ ಮೆಟ್ರೋದಿಂದ ಶುಭಸುದ್ದಿ..!

ಬಾಲ್ ಟ್ಯಾಂಪರಿಂಗ್‌ನಿಂದ ಕಳೆದ ಆವೃತ್ತಿಯಿಂದ ಹೊರಗುಳಿದ ಡೇವಿಡ್ ವಾರ್ನರ್ ಒಂದು ವರ್ಷದ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದರು. ತಂಡಕ್ಕೆ ವಾಪಾಸಾದ ಮೊದಲ ಪಂದ್ಯದಲ್ಲೇ ವಾರ್ನರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಾರ್ನರ್ ಹಾಗೂ ಜಾನಿ ಬೈರಿಸ್ಟೋ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. ಬೈರಿಸ್ಟೋ 39 ರನ್  ಸಿಡಿಸಿ ಔಟಾದರು.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್’ಗಿಂದು ಬಲಿಷ್ಠ ಮುಂಬೈ ಇಂಡಿಯನ್ಸ್ ಸವಾಲು..!

ವಾರ್ನರ್ 53 ಎಸೆತದಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 85 ರನ್ ಸಿಡಿಸಿದರು. ಆದರೆ ಯುಸೂಫ್ ಪಠಾಣ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಇನ್ನು ವಿಜಯ್ ಶಂಕರ್ ಅಜೇಯ 40 ರನ್ ಸಿಡಿಸಿದರೆ, ಮನೀಶ್ ಪಾಂಡೆ 8  ರನ್ ಕಲೆಹಾಕಿದರು. ಈ ಮೂಲಕ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿತು.