ಕೋಲ್ಕತಾ[ಏ.21]: ಆರ್‌ಸಿಬಿ ವಿರುದ್ಧ ಶುಕ್ರವಾರ ವೀರೋಚಿತ ಸೋಲು ಅನುಭವಿಸಿದ ಬಳಿಕ ಕೆಕೆಆರ್‌ನ ಪ್ರಚಂಡ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ ತಂಡದ ಬ್ಯಾಟಿಂಗ್‌ ಕ್ರಮಾಂಕವನ್ನು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. 

ಕೊನೆಯವರೆಗೂ KKR ಹೋರಾಟ- ಗೆಲುವಿನ ನಿಟ್ಟುಸಿರುಬಿಟ್ಟ RCB!

214 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತಿದ್ದ ಕೆಕೆಆರ್‌ ಮೊದಲ 5 ಓವರ್‌ ಒಳಗೇ 33 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತು. ರಾಬಿನ್‌ ಉತ್ತಪ್ಪ 20 ಎಸೆತಗಳಲ್ಲಿ ಕೇವಲ 9 ರನ್‌ ಗಳಿಸಿದರು. ರಸೆಲ್‌ ಕ್ರೀಸ್‌ಗಿಳಿದಾಗ ತಂಡದ ಗೆಲುವಿಗೆ 49 ಎಸೆತಗಳಲ್ಲಿ 135 ರನ್‌ಗಳ ಅವಶ್ಯಕತೆ ಇತ್ತು. ರಾಣಾ ಜತೆ ಸೇರಿ ಹೋರಾಡಿದ ರಸೆಲ್‌, ಕೊನೆ ಓವರ್‌ನಲ್ಲೂ ಕೆಕೆಆರ್‌ ಗೆಲುವಿನ ಆಸೆ ಇರಿಸಿಕೊಳ್ಳುವಂತೆ ಮಾಡಿದರು. 

ಐಪಿಎಲ್ ಬ್ರೇಕ್ ಬಗ್ಗೆ ತುಟಿಬಿಚ್ಚಿದ ಎಬಿಡಿ..

ಪಂದ್ಯದ ಬಳಿಕ ಮಾತನಾಡಿದ ರಸೆಲ್‌, ‘ನಾವು 10 ರನ್‌ಗಳಿಂದ ಸೋತೆವು. ಎರಡೇ ಎರಡು ಸಿಕ್ಸರ್‌ ಬೇಕಿತ್ತು. ಮಧ್ಯ ಓವರ್‌ಗಳಲ್ಲಿ ವೇಗವಾಗಿ ಬ್ಯಾಟ್‌ ಮಾಡಿದರೆ ಮಾತ್ರ ದೊಡ್ಡ ಮೊತ್ತ ಬೆನ್ನತ್ತಲು ಸಾಧ್ಯ. ತಂಡ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾನು 4ನೇ ಕ್ರಮಾಂಕದಲ್ಲಿ ಆಡಲು ಹಿಂಜರಿಯುವುದಿಲ್ಲ’ ಎಂದಿದ್ದಾರೆ.