ಹೈದರಾಬಾದ್(ಮಾ.31): 12ನೇ ಆವೃತ್ತಿ ಐಪಿಎಲ್ ಟೂರ್ನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿರೀಕ್ಷಿ ಆರಂಭ ಒದಗಿಸಿಲ್ಲ. ಮೊದಲೆರೆಡು ಪಂದ್ಯದಲ್ಲಿ RCB ಮುಗ್ಗರಿಸಿದೆ. ಇದೀಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುತ್ತಿದೆ. ಕಳೆದೆರಡು ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ RCB ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: 12ನೇ ಆವೃತ್ತಿ IPLನ ಮೊದಲ ಟೈ- ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ತಂಡದ ಮಧ್ಯಮ ಕ್ರಮಾಂಕ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲಾವಾಗಿದೆ. ಶಿಮ್ರೊನ್ ಹೆಟ್ಮೆಯರ್ ನಿರೀಕ್ಷೆ ತಕ್ಕ ಆಟವಾಡಿಲ್ಲ. ಹೀಗಾಗಿ ಹೆಟ್ಮೆಯರ್ ಬದಲಾವಣೆ ಮಾಡಲು ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಆದರೆ RCB ಮ್ಯಾನೇಜ್ಮೆಂಟ್ ಬದಲಾವಣೆ ಮಾಡಲು ಹಿಂದೇಟು ಹಾಕಿದೆ. 

ಇದನ್ನೂ ಓದಿ: IPL 2019: 1 ರನ್‌ಗಳಿಂದ ಶತಕ ಮಿಸ್ ಮಾಡಿದ ಪೃಥ್ವಿ ಶಾ!

RCB ಸಂಭನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್, ಮೊಯಿನ್ ಆಲಿ, ಎಬಿ ಡಿವಿಲಿಯರ್ಸ್, ಶಿಮ್ರೊನ್ ಹೆಟ್ಮೆಯರ್, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಟಿಮ್ ಸೌಥಿ, ಉಮೇಶ್ ಯಾದವ್, ಯುಜುವೆಂದ್ರ ಚೆಹಾಲ್, ಮೊಹಮ್ಮದ್ ಸಿರಾಜ್