ದೆಹಲಿ(ಮಾ.30): ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಪೃಥ್ವಿ ಶಾ  ಕೇವಲ 1 ರನ್‌ಗಳಿಂದ ಶತಕ ವಂಚಿತರಾಗಿದ್ದಾರೆ. ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೃಥ್ವಿ ಶಾ 55 ಎಸೆತದಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 99 ರನ್ ಸಿಡಿಸಿ ಔಟಾದರು. 

ಕೆಕೆಆರ್ ನೀಡಿದ 186 ರನ್ ಟಾರ್ಗೆಟ್  ಮುಂದೆ ಅಬ್ಬರಿಸಿದ ಪೃಥ್ವಿ ಶಾ ಕೆಕೆಆರ್ ತಲೆನೋವು ಹೆಚ್ಚಿಸಿದರು.  ಆದರೆ 1 ರನ್‌ಗಳಿಂದ ಶತಕ ವಂಚಿತರಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ 12ನೇ ಆವೃತ್ತಿ ಐಪಿಎಲ್ ಪಂದ್ಯದಲ್ಲಿ 2ನೇ ಶತಕ ದಾಖಲಾಗೋ ಐತಿಹಾಸಿಕ ಕ್ಷಣ ತಪ್ಪಿಹೋಗಿದೆ.