ಮುಂಬೈ(ಏ.16): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ 8 ಪಂದ್ಯದಲ್ಲಿ 7 ರಲ್ಲಿ ಸೋಲು ಕಂಡಿದೆ. ಗೆದ್ದಿರೋದು ಕೇವಲ 1 ಪಂದ್ಯ ಮಾತ್ರ. ಸೋಲಿನಿಂದ ಕಂಗೆಟ್ಟಿರುವ RCB ತಂಡ ಪ್ಲೇ ಆಫ್ ಹಂತಕ್ಕೇರುತ್ತಾ? ಅನ್ನೋ ಪ್ರಶ್ನೆ ಇದೀಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ನೆಹ್ರಾ ಸಲಹೆಯಿಂದಲೇ RCBಗೆ ಸೋಲು-ಟ್ರೋಲ್ ಆದ ಕೋಚ್!

RCB ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೆ ಪ್ಲೇ ಆಫ್ ಅವಕಾಶ ಖಚಿತ ಎಂದು ಯಜುವೇಂದ್ರ ಚಹಾಲ್ ಹೇಳಿದ್ದಾರೆ. 8 ಪಂದ್ಯ ಮುಗಿದಿದೆ. ಇನ್ನುಳಿದ 6 ಪಂದ್ಯ ಗೆದ್ದರೆ RCB 14 ಅಂಕ ಪಡೆಯಲಿದೆ. ಕಳೆದ ಆವೃತ್ತಿಯಲ್ಲಿ 14 ಅಂಕ ಪಡೆದ ತಂಡ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿದೆ. ಹೀಗಾಗಿ RCB ಪ್ಲೇ ಆಫ್ ಹಂತಕ್ಕೇರಲು ಇನ್ನೂ ಅವಕಾಶವಿದೆ ಎಂದು ಚಹಲ್ ಹೇಳಿದ್ದಾರೆ.

ಇದನ್ನೂ ಓದಿ: IPL 2019: RCB ಸೋಲಿಗೆ ಮತ್ತೊಂದು ಸೇರ್ಪಡೆ- ಪ್ಲೇ ಆಫ್ ಕನಸು ಭಗ್ನ!

ಮುಂಬೈ ವಿರುದ್ಧದ ಪಂದ್ಯ ಅಂತಿಮ ಹಂತದಲ್ಲಿ ಕೈಜಾರಿತು. ಹಾರ್ಧಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ.  ನಮ್ಮ ಕೆಲ ನಿರ್ಧಾರಗಳಿಂದ ಮುಂಬೈ ಗೆಲುವಿನ ದಡ ಸೇರಿತು ಎಂದು ಚಹಾಲ್ ಹೇಳಿದ್ದಾರೆ. ಎಪ್ರಿಲ್ 19ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ದ ಹೋರಾಟ ನಡೆಸಲಿದೆ.