ಮುಂಬೈ(ಮಾ.25): ಐಪಿಎಲ್ ಟೂರ್ನಿ 12ನೇ ಆವೃತ್ತಿ ಮುಂಬೈ ಇಂಡಿಯನ್ಸ್ ಪಾಲಿಗೆ ಶುಭಕರವಾಗಿರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಮುಗ್ಗರಿಸಿದೆ. ಇಷ್ಟೇ ಅಲ್ಲ ಮುಂಬೈ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಇಂಜುರಿಗೆ ತುತ್ತಾಗಿದ್ದಾರೆ. ಬುಮ್ರಾ ಇಂಜುರಿ ಮುಂಬೈ ನಾಯಕ ರೋಹಿತ್  ಶರ್ಮಾಗಿಂತ, RCB ನಾಯಕ ವಿರಾಟ್ ಕೊಹ್ಲಿ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: IPL 2019: ಇಂದು ರಾಯಲ್ಸ್‌-ಕಿಂಗ್ಸ್‌ ಕದನ!

ಅಂತಿಮ ಓವರ್‌ನ ಅಂತಿಮ ಎಸೆತದಲ್ಲಿ ಡೆಲ್ಲಿ ತಂಡದ ರಿಷಬ್ ಪಂತ್ ಸ್ಟ್ರೈಟ್ ಶಾಟ್ ಹೊಡೆದಿದ್ದರು. ಬೌಂಡರಿ ತಡೆಯಲು ಹೋದ ಬುಮ್ರಾ ಇಂಜುರಿಗೆ ತುತ್ತಾಗಿದ್ದಾರೆ. ಸದ್ಯ ಬುಮ್ರಾ ಚೇತರಿಸಿಕೊಂಡಿದ್ದಾರೆ. ಆದರೆ ಮುಂದಿನ ಪಂದ್ಯ ಆಡಲು ಶಕ್ತರೇ ಅನ್ನೋ ಕುರಿತು ಇಂದು(ಮಾ.25) ವೈದ್ಯರು ವರದಿ ನೀಡಲಿದ್ದಾರೆ. ವಿಶ್ವಕಪ್ ಟೂರ್ನಿಗೆ ಇನ್ನು 2 ತಿಂಗಳು ಮಾತ್ರ ಬಾಕಿ ಅಷ್ಟರಲ್ಲೇ ಬುಮ್ರಾ ಇಂಜುರಿಗೆ ತುತ್ತಾಗಿರುವುದು ನಾಯಕ ವಿರಾಟ್ ಕೊಹ್ಲಿ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪಂತ್ ಆರ್ಭಟ- ವ್ಯರ್ಥವಾಯ್ತು ಯುವಿ ಹೋರಾಟ-ಡೆಲ್ಲಿಗೆ ಸಿಕ್ತು ಭರ್ಜರಿ ಗೆಲುವು!

ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಪ್ರದರ್ಶನ ತಂಡಕ್ಕೆ ಅತೀ ಮುಖ್ಯ. ಐಪಿಎಲ್ ಟೂರ್ನಿಗೂ ಮುನ್ನ ವಿಶ್ವಕಪ್ ತಂಡದಲ್ಲಿ ಆಡೋ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿತ್ತು. ಆದರೆ ಇದಕ್ಕೆ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿತ್ತು. ಇದೀಗ ಆರಂಭದಲ್ಲೇ ಬುಮ್ರಾ ಇಂಜುರಿಗೆ ತುತ್ತಾಗಿರೋದು ಕೊಹ್ಲಿ ಮಾತ್ರವಲ್ಲ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ.