ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಅಲೆಯಲ್ಲಿರುವ ಮುಂಬೈ ಹಾಗೂ ಪಂಜಾಬ್ ಹೋರಾಟ ಆರಂಭಗೊಂಡಿದೆ. ಟಾಸ್ ಗೆದ್ದ ಮುಂಬೈ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

ಮುಂಬೈ(ಏ.10): ಗೆಲುವಿನ ಲಯದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿದೆ. ಸಮಬಲರ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಅಶ್ವಿನ್ ಮಂಕಡಿಂಗ್ ಟ್ರಿಕ್: ಕ್ರೀಸ್ ತೊರೆಯದ ವಾರ್ನರ್

ಮುಂಬೈ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಇಂಜುರಿಯಿಂದ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಕೀರನ್ ಪೊಲಾರ್ಡ್ ನಾಯಕತ್ವ ವಹಿಸಿದ್ದಾರೆ. ರೋಹಿತ್ ಬದಲು ಸಿದ್ದೇಶ್ ಲಾಡ್ ತಂಡ ಸೇರಿಕೊಂಡಿದ್ದಾರೆ . ಇನ್ನು ಪಂಜಾಬ್ ತಂಡದಲ್ಲಿ ಕನ್ನಡಿ ಮಯಾಂಕ್ ಅಗರ್ವಾಲ್ ಬದಲು ಮತ್ತೊರ್ವ ಕನ್ನಡಿಗ ಕರುಣ್ ನಾಯರ್ ತಂಡ ಸೇರಿಕೊಂಡಿದ್ದಾರೆ. ಮಜೀಬ್ ಯುಆರ್ ರಹಮಾನ್ ಬದಲು ಹಾರ್ಡಸ್ ಕಮ್‌ಬ್ಯಾಕ್ ಮಾಡಿದ್ದಾರ.

ಮುಂಬೈ ಇಂಡಿಯನ್ಸ್ ಆಡಿದ 5 ಪಂದ್ಯದಲ್ಲಿ 3 ರಲ್ಲಿ ಗೆಲುವು 2 ರಲ್ಲಿ ಸೋಲು ಕಂಡಿದೆ. ಈ ಮೂಲಕ 6 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇಂದು ಪಂಜಾಬ್ ತಂಡವನ್ನು ಮಣಿಸೋ ವಿಶ್ವಾಸದಲ್ಲಿದೆ. ಇತ್ತ ಪಂಜಾಬ್ 6 ರಲ್ಲಿ 4 ಪಂದ್ಯ ಗೆದ್ದು 2 ರಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.