ದೆಹಲಿ(ಏ.18): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಫಿರೋಝ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ  ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

 

 

ಇದನ್ನೂ ಓದಿ: IPL 2019: ಧೋನಿಗೆ ವಿಶ್ರಾಂತಿ- 2010ರ ಬಳಿಕ ಇದೇ ಮೊದಲು!

ಯುವ ಆಟಗಾರರನ್ನೇ ಓಳಗೊಂಡಿರುವ ಡೆಲ್ಲಿ ತಂಡ ಆಡಿದ 8 ಪಂದ್ಯದಲ್ಲಿ 5ರಲ್ಲಿ ಗೆಲುವು, 3ರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ಕೂಡ ಆಡಿದ 8 ಪಂದ್ಯದಲ್ಲಿ 5ರಲ್ಲಿ ಗೆಲುವು ಹಾಗೂ 3ರಲ್ಲಿ ಸೋಲು ಕಂಡಿದೆ. ಆದರೆ ಕಡಿಮೆ ರನ್ ರೇಟ್ ಹೊಂದಿರುವ ಮುಂಬೈ 3ನೇ ಸ್ಥಾನದಲ್ಲಿದೆ.