ಹೈದರಾಬಾದ್(ಏ.17): ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಲೀಗ್ ಪಂದ್ಯದಿಂದ CSK ನಾಯಕ ಎಂ.ಎಸ್.ಧೋನಿ ಹೊರಗುಳಿದಿದ್ದಾರೆ. ಧೋನಿ ಬದಲು ಸುರೇಶ್ ರೈನಾ ತಂಡವನ್ನು ಮುನ್ನಡೆಸಿದರು. ಬೆನ್ನು ನೋವಿಗೆ ತುತ್ತಾಗಿರುವ ಧೋನಿ ಈ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಧೋನಿ ಬದಲು ಸ್ಯಾಮ್ ಬಿಲ್ಲಿಂಗ್ಸ್ ತಂಡ ಸೇರಿಕೊಂಡರು.

ಐಪಿಎಲ್ ಟೂರ್ನಿಯಲ್ಲಿ ಧೋನಿ 2010ರಲ್ಲಿ ಒಂದು ಪಂದ್ಯದಿಂದ ಹೊರಗುಳಿದಿದ್ದರು. ಇದಾದ ಬಳಿಕ ಧೋನಿ ಐಪಿಎಲ್ ಟೂರ್ನಿಯ ಪಂದ್ಯಕ್ಕೆ ಅಲಭ್ಯರಾಗಿಲ್ಲ. ಸದಾ ಫಿಟ್ ಆಗಿರುವ ಧೋನಿ 2010ರ ಬಳಿಕ ಇದೇ ಮೊದಲ ಬಾರಿಗೆ ಇಂಜುರಿ ಕಾರಣದಿಂದ ಹೊರಗುಳಿದಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಧೋನಿ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಮತ್ತೆ ಬೆನ್ನು ನೋವಿಗೆ ಗುರಿಯಾದರು. ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಧೋನಿಗೆ ವಿಶ್ರಾಂತಿ ಪಡೆಯುವುದು ಸೂಕ್ತ. 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಧೋನಿ ಪ್ರಮುಖ ಪಾತ್ರ ನಿರ್ವಹಸಲಿದ್ದಾರೆ.