ಮುಂಬೈ ಇಂಡಿಯನ್ಸ್ ತಂಡ ಸೆಟ್  ಕಾಂಬೀನೇಷನ್ ಮೂಲಕ ಕಳೆದ ಪಂದ್ಯ ಗೆದ್ದುಕೊಂಡಿತು. ಲಸಿತ್ ಮಲಿಂಗಾ ಹಾಗೂ ಬುಮ್ರಾ ಡೆತ್ ಓವರ್ ಮುಂಬೈ ಗೆಲುವಿಗೆ ಸಹಕಾರಿಯಾಗಿತ್ತು. ಇದೀಗ ಮುಂಬೈಗೆ ಮತ್ತೆ ಆಘಾತವಾಗಿದೆ. ವೇಗಿ ಲಸಿತ್ ಮಲಿಂಗ್ ಐಪಿಎಲ್ ಟೂರ್ನಿಯಿಂದ ಹಿಂದ ಸರಿದಿದ್ದಾರೆ.

ಮುಂಬೈ(ಏ.02): ಐಪಿಎಲ್ 12ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ 2 ಪಂದ್ಯ ಸೋತು 3ನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು. ಆರಂಭಿಕ 2 ಪಂದ್ಯಕ್ಕೆ ಅಲಭ್ಯರಾಗಿದ್ದ ಶ್ರೀಲಂಕ ವೇಗಿ ಲಸಿತ್ ಮಲಿಂಗ್ 3ನೇ ಪಂದ್ಯದಲ್ಲಿ ಕಣಕ್ಕಿಳಿದು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಇದೀಗ 4ನೇ ಪಂದ್ಯ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಆತಂಕ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಧೋನಿ CSK ಪರ ಅಬ್ಬರಿಸುವುದರ ಹಿಂದಿನ ಗುಟ್ಟೇನು..?

ಮುಂಬೈಕ್ಕೆ ಸ್ಟಾರ್ ವೇಗಿ, ಡೆತ್ ಓವರ್ ಸ್ಪೆಷಲಿಸ್ಟಿ ಲಸಿತ್ ಮಲಿಂಗ್ ಸೇವೆ ಅಲಭ್ಯಗೊಂಡಿದೆ. ಲಸಿತ್ ಮಲಿಂಗಾ ದಿಢೀರ್ ತವರಿಗೆ ವಾಪಾಸ್ಸಾಗಿದ್ದಾರೆ. ಲಂಕಾ ದೇಸಿ ಕ್ರಿಕೆಟ್ ಆಡಲು ಮಲಿಂಗ ತವರಿಗೆ ವಾಪಾಸ್ಸಾಗಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾಗೂ ಬಿಸಿಸಿಐ ಒತ್ತಡಕ್ಕೆ ಮಣಿದು ಲಸಿತ್ ಮಲಿಂಗಾಗೆ ಐಪಿಎಲ್ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅವಕಾಶ ಮಾಡಿಕೊಟ್ಟಿತು.

ಇದನ್ನೂ ಓದಿ: ಪ್ರೀತಿ ಝಿಂಟಾ ಜೊತೆ ಬಾಂಗ್ರಾ ಡ್ಯಾನ್ಸ್ ಮಾಡಿದ ಹ್ಯಾಟ್ರಿಕ್ ವಿಕೆಟ್ ಸಾಧಕ!

ವಿಶ್ವಕಪ್ 2019ರಲ್ಲಿ ಶ್ರೀಲಂಕಾ ತಂಡದ ನಾಯಕನಾಗಲು ಮಲಿಂಗ ಮತ್ತೆ ದೇಸಿ ತಂಡದ ಆಡಲು ಲಂಕಾಗೆ ತೆರಳಿದ್ದಾರೆ. ಮಲಿಂಗಾ ಅಲಭ್ಯತೆ ಮುಂಬೈ ತಂಡಕ್ಕೆ ತೀವ್ರ ಹಿನ್ನಡೆಯಾಗಲಿದೆ. ನಾಳೆ(ಏ.03)ತವರಿನಲ್ಲಿ ಮುಂಬೈ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸಲಿದೆ. ಈ ಮಹತ್ವದ ಹೋರಾಟಕ್ಕೂ ಮುನ್ನ ಮುಂಬೈ ತಂಡಕ್ಕೆ ಆಘಾತವಾಗಿದೆ.