ಅಭಿಮಾನಿಯೊಬ್ಬ ಎಂ.ಎಸ್‌.ಧೋನಿಯನ್ನು ಅಪ್ಪಿಕೊಂಡು ಸೆಲ್ಫಿ ತೆಗೆದುಕೊಳ್ಳಲು ಮೈದಾನಕ್ಕೆ ನುಗ್ಗಿದ. ಧೋನಿ ಆ ಅಭಿಮಾನಿಯನ್ನು ಮೈದಾನದ ತುಂಬಾ ಓಡಾಡಿಸಿದರು. ಆ ವಿಡಿಯೋವೀಗ ವೈರಲ್ ಆಗಿದೆ.

ಚೆನ್ನೈ[ಮಾ.19]: ಅಭಿಮಾನಿಗಳಲ್ಲಿ ಐಪಿಎಲ್‌ ಜ್ವರ ಶುರುವಾಗಿದ್ದು, ಚೆನ್ನೈನಲ್ಲಿ ಸ್ವಲ್ಪ ಹೆಚ್ಚಾಗಿಯೇ ಇದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

CSK ಅಭ್ಯಾಸ ಪಂದ್ಯಕ್ಕೆ ಜನಸಾಗರ!

Scroll to load tweet…

ಭಾನುವಾರ ಸಿಎಸ್‌ಕೆ ತಂಡದ ಅಭ್ಯಾಸ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಚೆಪಾಕ್‌ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬ ಎಂ.ಎಸ್‌.ಧೋನಿಯನ್ನು ಅಪ್ಪಿಕೊಂಡು ಸೆಲ್ಫಿ ತೆಗೆದುಕೊಳ್ಳಲು ಮೈದಾನಕ್ಕೆ ನುಗ್ಗಿದ. ಧೋನಿ ಆ ಅಭಿಮಾನಿಯನ್ನು ಮೈದಾನದ ತುಂಬಾ ಓಡಾಡಿಸಿದರು. ಕೊನೆಗೆ ಅಭಿಮಾನಿಯ ಕೈಕುಲುಕಿದ ಧೋನಿ ಆತನ ಆಸೆ ಈಡೇರಿಸಿದರು. 

ಸೆಕ್ಯೂರಿಟಿ ಕಣ್ತಪ್ಪಿಸಿ ಒಳ ನುಗ್ಗಿದ ಅಭಿಮಾನಿ ಜೊತೆ ಧೋನಿ ಫನ್!

ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಮೈದಾನದಿಂದ ಹೊರಕರೆದೊಯ್ದರು. ಈ ವಿಡಿಯೋವನ್ನು ಸಿಎಸ್‌ಕೆ ತಂಡ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಹಾಕಿದ್ದು, ಭಾರೀ ವೈರಲ್‌ ಆಗಿದೆ. ಇತ್ತೀಚೆಗೆ ನಾಗ್ಪುರದಲ್ಲಿ ಆಸ್ಪ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯದ ವೇಳೆಯೂ ಇಂತದ್ದೇ ಪ್ರಸಂಗ ನಡೆದಿತ್ತು.