ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ತಂಡ ಅಭ್ಯಾಸ ಪಂದ್ಯವೊಂದನ್ನು ಆಡಿತು. ಸಿಎಸ್‌ಕೆ ಆಟಗಾರರನ್ನೇ ಎರಡು ತಂಡಗಳಾಗಿ ವಿಂಗಡಿಸಿ ಪಂದ್ಯ ಆಡಿಸಲಾಯಿತು.
ಚೆನ್ನೈ(ಮಾ.18): ಐಪಿಎಲ್ 12ನೇ ಆವೃತ್ತಿಗೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಆರಂಭಿಸಿದೆ.
ಐಪಿಎಲ್ 2019: SRH ತಂಡ ಸೇರಿಕೊಂಡು ಭಾವುಕರಾದ ವಾರ್ನರ್!
ಭಾನುವಾರ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ತಂಡ ಅಭ್ಯಾಸ ಪಂದ್ಯವೊಂದನ್ನು ಆಡಿತು. ಸಿಎಸ್‌ಕೆ ಆಟಗಾರರನ್ನೇ ಎರಡು ತಂಡಗಳಾಗಿ ವಿಂಗಡಿಸಿ ಪಂದ್ಯ ಆಡಿಸಲಾಯಿತು. ಈ ಪಂದ್ಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಕ್ರೀಡಾಂಗಣದ ಒಳಕ್ಕೆ ಪ್ರವೇಶಿಸುವ ವೇಳೆ ನೂಕು ನುಗ್ಗಲು ಸಹ ಸಂಭವಿಸಿತು ಎನ್ನಲಾಗಿದೆ.
ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!
2018ರ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಚೆನ್ನೈ ಸೂಪರ್’ಕಿಂಗ್ಸ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮಾ.23ಕ್ಕೆ ಇದೇ ಮೈದಾನದಲ್ಲಿ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಸಿಎಸ್‌ಕೆ-ಆರ್‌ಸಿಬಿ ತಂಡಗಳು ಸೆಣಸಲಿವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 18, 2019, 4:28 PM IST