ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮೂರು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವಿನ ಕಾಳಗವನ್ನು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹೋಲಿಸಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ, ನೀವೇ ನೋಡಿ..

ಮುಂಬೈ[ಏ.04]: ಭಾರತದ ಹಿರಿಯ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಐಪಿಎಲ್‌ ಪಂದ್ಯ ಭಾರತ-ಪಾಕಿಸ್ತಾನ ಪಂದ್ಯವಿದ್ದಂತೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ನಾನು ಮುಂಬೈ ತಂಡದಲ್ಲಿದ್ದಾಗ, ಚೆನ್ನೈ ವಿರುದ್ಧ ಪ್ರತಿ ಪಂದ್ಯವನ್ನು ಗೆಲ್ಲಲೇಬೇಕು ಎಂಬ ಹಠದೊಂದಿಗೆ ಆಡುತ್ತಿದ್ದೆ. ಆದರೀಗ ಚೆನ್ನೈ ತಂಡದಲ್ಲಿ ಇರುವ ಕಾರಣ, ಮುಂಬೈ ವಿರುದ್ಧ ಗೆಲ್ಲಲೇಬೇಕು ಎನ್ನುವ ಮನಸ್ಥಿತಿಯೊಂದಿಗೆ ಆಡುತ್ತೇನೆ. ಎರಡು ತಂಡಗಳ ನಡುವೆ ಅಷ್ಟೊಂದು ವೈರತ್ವವಿದೆ’ ಎಂದು ಹರ್ಭಜನ್‌ ಹೇಳಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಐಪಿಎಲ್‌ ಪಂದ್ಯವನ್ನು ಭಾರತ-ಪಾಕ್‌ ಪಂದ್ಯಕ್ಕೆ ಹೋಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಬಾನಿ ಮಗನ ಮದುವೆ: ಟಿ20ಗೆ ಯುವಿ, ಭಜ್ಜಿ ಚಕ್ಕರ್‌

2018ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹರ್ಭಜನ್ ಸಿಂಗ್ ಅವರನ್ನು ಕೈಬಿಟ್ಟಿತ್ತು. ಹೀಗಾಗಿ ಚೆನ್ನೈ ಸೂಪರ್’ಕಿಂಗ್ಸ್ 2 ಕೋಟಿ ನೀಡಿ ಆಪ್’ಸ್ಪಿನ್ನರ್ ಅವರನ್ನು ಖರೀದಿಸಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಮಣಿಸಿದೆ.