ನವದೆಹಲಿ(ಮಾ.01): ಭಾರತ ಕ್ರಿಕೆಟ್‌ನ ದಿಗ್ಗಜ ಆಟಗಾರರಾದ ಯುವರಾಜ್‌ ಸಿಂಗ್‌ ಹಾಗೂ ಹರ್ಭಜನ್‌ ಸಿಂಗ್‌, ಮುಕೇಶ್‌ ಅಂಬಾನಿ ಪುತ್ರನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು, ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯಗಳಿಗೆ ಗೈರಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಪಂಜಾಬ್ ತಂಡಕ್ಕೆ ಆಸರೆಯಾಗಬೇಕಿದ್ದ ಹಿರಿಯ ಕ್ರಿಕೆಟಿಗರು ಈ ನಡೆ ಇದೀಗ ಬಿಸಿಸಿಐ ಮೆಟ್ಟಿಲೇರಿದೆ.

ಇದನ್ನೂ ಓದಿ: ಇಂಡೋ-ಪಾಕ್ ಟೆನ್ಶನ್: ಭಾರತ-ಆಸೀಸ್‌ ಏಕದಿನ ಬೆಂಗಳೂರಿಗೆ ಶಿಫ್ಟ್‌?

ಪಂಜಾಬ್‌ ಪರ ಟೂರ್ನಿಯಲ್ಲಿ ಆಡುತ್ತಿದ್ದ ಇಬ್ಬರೂ, ವೈಯಕ್ತಿಕ ಕಾರಣಗಳನ್ನು ನೀಡಿ ರಜೆ ಪಡೆದಿದ್ದಾರೆ. ಆದರೆ ಇಬ್ಬರೂ ಸ್ವಿಟರ್‌ಲೆಂಡ್‌ನ ಸೇಂಟ್‌ ಮೊರ್ಟಿಜ್‌ಗೆ ತೆರಳಿದ್ದು, ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಇತ್ತ ಪಂಜಾಬ್ ಹಿರಿಯ ಕ್ರಿಕೆಟಿಗರಿಲ್ಲದೆ ಸೋಲಿನತ್ತ ಮುಖಮಾಡಿದೆ.

ಇದನ್ನೂ ಓದಿ: ಪಾಕ್ ಮೇಲೆ ಬಾಂಬ್ ದಾಳಿ: ಸೆಹ್ವಾಗ್ ಟ್ವೀಟ್ ಅದ್ಭುತ!

ಕಳೆದ 5 ಋುತುಗಳಿಂದ ತಮಗಿಷ್ಟಬಂದಾಗ ಪಂಜಾಬ್‌ ತಂಡದಲ್ಲಿ ಆಡುವುದು, ಇಲ್ಲದಿದ್ದಾಗ ತಂಡದಿಂದ ದೂರ ಉಳಿಯುವ ಮೂಲಕ ಯುವಕರಿಗೆ ತಪ್ಪು ಸಂದೇಶ ರವಾನಿಸುತ್ತಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಸದ್ಯ ನಡೆಯುತ್ತಿರುವ ಟಿ20 ಟೂರ್ನಿಯ ಕೆಲ ಪಂದ್ಯಗಳಿಗೆ ಹರ್ಭಜನ್‌ ಪಂಜಾಬ್‌ ತಂಡದ ನಾಯಕ ಸಹ ಆಗಿದ್ದರು.