ಮುಂಬೈ(ಏ.10): ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್ ರೆಡಿಯಾಗಿದೆ. ಆದರೆ ನಾಯಕ ರೋಹಿತ್ ಶರ್ಮಾ ಅಭ್ಯಾಸದ ವೇಳೆ ಗಾಯಗೊಂಡಿರುವುದು ತಂಡದ ಚಿಂತೆ ಹೆಚ್ಚಿಸಿದೆ. ಸದ್ಯ ರೋಹಿತ್ ಚೇತರಿಸಿಕೊಂಡಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರಾ? ಅನ್ನೋದು ಬಹಿರಂಗವಾಗಿಲ್ಲ. ಆದರೆ ಮುಂಬೈ ತಂಡಕ್ಕೆ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಬಲ ಸಿಕ್ಕಿದೆ.

ಇದನ್ನೂ ಓದಿ: 12 ಗಂಟೆಗಳಲ್ಲಿ 2 ಪಂದ್ಯಗಳನ್ನು ಆಡಿದ ಲಸಿತ್‌ ಮಾಲಿಂಗ!

ದೇಸಿ ಟೂರ್ನಿಗಾಗಿ ಲಸಿತ್ ಮಲಿಂಗ ದಿಢೀರ್ ತವರಿಗೆ ಮರಳಿದ್ದರು. ಹೀಗಾಗಿ ಐಪಿಎಲ್ ಪಂದ್ಯಗಳನ್ನ ಮಿಸ್ ಮಾಡಿದ್ದರು. ಇದೀಗ ಮಾಲಿಂಗ ಮುಂಬೈ ತಂಡ ಸೇರಿಕೊಂಡಿದ್ದಾರೆ. ಪಂಜಾಬ್ ವಿರುದ್ದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.  ಹೀಗಾಗಿ ಮುಂಬೈ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಟಗೊಂಡಿದೆ.

ಇದನ್ನೂ ಓದಿ: ಪಂಜಾಬ್’ಗೆ ಶಾಕ್ ನೀಡಲು ರೆಡಿಯಾದ ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಆಡಿದ 5 ಪಂದ್ಯದಲ್ಲಿ 3 ರಲ್ಲಿ ಗೆಲುವು 2 ರಲ್ಲಿ ಸೋಲು ಕಂಡಿದೆ. ಈ ಮೂಲಕ 6 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇಂದು ಪಂಜಾಬ್ ತಂಡವನ್ನು ಮಣಿಸೋ ವಿಶ್ವಾಸದಲ್ಲಿದೆ.