ಐಪಿಎಲ್ ಲೀಗ್ ಪಂದ್ಯದ ಕೊನೆಯ ದಿನ ಪ್ಲೇ ಆಫ್ ಹೋರಾಟ ಜೋರಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ KXIP ಫೀಲ್ಡಿಂಗ್ ಆಯ್ಕೆ ಮಾಡಿದೆ. ತಂಡದಲ್ಲಿರುವ ಬದಲಾವಣೆ ಏನು? ಇಲ್ಲಿದೆ ವಿವರ.
ಮೊಹಾಲಿ(ಮೇ.05): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಲೀಗ್ ಪಂದ್ಯ ಇಂದಿಗೆ ಕೊನೆಗೊಳ್ಳುತ್ತಿದೆ. ಕೊನೆಯ ಪಂದ್ಯದಲ್ಲೂ ಪ್ಲೇ ಆಫ್ ಪ್ರವೇಶಕ್ಕೆ ಹೋರಾಟ ಜೋರಾಗಿದೆ. ಇಂದು ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರಿಸುತ್ತಿರುವ ಪಂಜಾಬ್, ಭಾರಿ ಅಂತರದಲ್ಲಿ ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸೋ ಲೆಕ್ಕಾಚಾರದಲ್ಲಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ KXIP ಫೀಲ್ಡಿಂಗ್ ಆಯ್ಕೆ ಮಾಡಿದೆ.ಪಂಜಾಬ್ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದರೆ, ಸಿಎಸ್‌ಕೆ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನೂ ಓದಿ: ಗೆಲುವಿನೊಂದಿಗೆ 2019ರ IPL ಟೂರ್ನಿಗೆ ವಿದಾಯ ಹೇಳಿದ RCB
ಕಿಂಗ್ಸ್ ಇಲೆವೆನ್ ಪಂಜಾಬ್ 13 ಪಂದ್ಯದಲ್ಲಿ 5 ಗೆಲುವು ಸಾಧಿಸಿ 10 ಅಂಕ ಸಂಪಾದಿಸಿದೆ. ಇಂದು ಗೆಲುವು ಸಾಧಿಸಿದರೆ 12 ಅಂಕ ಸಂಪಾದಿಸಲಿದೆ. ಆದರೆ ಪಂಜಾಬ್ ರನ್‌ರೇಟ್ -0.351 ಇರೋದರಿಂದ ಪ್ಲೇ ಅಫ್ ಹಾದಿ ಸುಲಭವಿಲ್ಲ. ಇತ್ತ ಚೆನ್ನೈ 9 ಗೆಲುವಿನ ಮೂಲಕ 18 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ CSK ಗೆಲುವು ಸಾದಿಸಿದರೆ, 20 ಅಂಕದೊಂದಿಗೆ ಮೊದಲ ಸ್ಥಾನ ಭದ್ರಪಡಿಸಿಕೊಳ್ಳಲಿದೆ.
