ಕೋಲ್ಕತಾ(ಮಾ.17): 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಸದ್ಯ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿದೆ. ಚುಟುಕು ಸಮರಕ್ಕೆ ಇನ್ನೊಂದು ವಾರ ಬಾಕಿ ಇರುವಾಗಲೇ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ, ಯುವ ಹಾಗೂ ಪ್ರತಿಭಾನ್ವಿತ ಸ್ಪಿನ್ನರ್ ಕೆಸಿ ಕಾರ್ಯಪ್ಪ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ರಾಜಕೀಯ ಜಾಹೀರಾತು: ಬಿಸಿಸಿಐಗೆ ಸ್ಟಾರ್ ಪತ್ರ

ಕೆಕೆಆರ್ ತಂಡದ ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಇವರ ಬದಲು ಇದೀಗ ಕೆಸಿ ಕಾರ್ಯಪ್ಪ ಹಾಗೂ ಕೇರಳಾ ವೇಗಿ ಸಂದೀಪ್ ವಾರಿಯರ್ ತಂಡಕ್ಕೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಐಪಿಎಲ್ ತಂಡ ಸೇರಿಕೊಂಡ ಸ್ಮಿತ್, ವಾರ್ನರ್- SRH,RR ಮತ್ತಷ್ಟು ಬಲಿಷ್ಠ!

2015ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮೂಲಕ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ಕನ್ನಡಿಗ ಕೆಸಿ ಕಾರ್ಯಪ್ಪ, 2016 ಹಾಗೂ 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಿದ್ದರು. ಮಿಸ್ಟ್ರಿ ಸ್ಪಿನ್ ಮೂಲಕ ಗಮನಸೆಳೆದಿರುವ ಕಾರ್ಯಪ್ಪ ಇದೀಗ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. ಇಷ್ಟೇ ಅಲ್ಲ ರಾಬಿನ್ ಉತ್ತಪ್ಪ, ಪ್ರಸಿದ್ಧ ಕೃಷ್ಣ ಹಾಗೂ ಕೆಸಿ ಕಾರ್ಯಪ್ಪ ಒಟ್ಟು ಮೂವರು ಕನ್ನಡಿಗರು ಕೆಕೆಆರ್ ತಂಡದಲ್ಲಿರುವುದು ನಮ್ಮ ಹೆಮ್ಮೆ.