ನವದೆಹಲಿ[ಏ.15]: ಕರ್ನಾಟಕ ತಂಡದ ಎಡಗೈ ಸ್ಪಿನ್ನರ್‌ ಜೆ.ಸುಚಿತ್‌ 12ನೇ ಆವೃತ್ತಿಯ ಐಪಿಎಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೇರಿಕೊಂಡಿದ್ದಾರೆ. 

ವೇಗಿ ಹರ್ಷಲ್‌ ಪಟೇಲ್‌ ಗಾಯಗೊಂಡು ಈ ಆವೃತ್ತಿಯಿಂದ ಹೊರಬಿದ್ದ ಕಾರಣ, ಅವರ ಬದಲಿಗೆ ಸುಚಿತ್‌ಗೆ ಸ್ಥಾನ ನೀಡಲಾಗಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿದ್ದ ಸುಚಿತ್‌, ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದರು. 

KKR ಎದುರಿಸುವ ಮುನ್ನವೇ ಡೆಲ್ಲಿಗೆ ಸಂಕಷ್ಠ...!

ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ, ಡೆಲ್ಲಿ ತಂಡ ಕರ್ನಾಟಕ ಆಟಗಾರನನ್ನು ಆಯ್ಕೆ ಟ್ರಯಲ್ಸ್‌ಗೆ ಕರೆದಿತ್ತು. ಟ್ರಯಲ್ಸ್‌ನಲ್ಲಿ ಸಮಾಧಾನಕರ ಪ್ರದರ್ಶನ ನೀಡಿದ ಕಾರಣ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.