KKR ಎದುರಿಸುವ ಮುನ್ನವೇ ಡೆಲ್ಲಿಗೆ ಸಂಕಷ್ಠ...!
ಸೋಲು-ಗೆಲುವುಗಳ ಸಮಾನವಾಗಿ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಡೆಲ್ಲಿ ತಂಡಕ್ಕೆ ಶಾಕ್’ವೊಂದು ಎದುರಾಗಿದೆ. ಏನದು ಸ್ಟೋರಿ ನೀವೇ ನೋಡಿ
ಕೋಲ್ಕತಾ(ಏ.12): ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಹರ್ಷಲ್ ಪಟೇಲ್ ಬಲಗೈ ಮೂಳೆ ಮುರಿತದಿಂದಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ ಎಂದು ತಂಡದ ಕೋಚ್ ರಿಕಿ ಪಾಂಟಿಂಗ್ ಗುರುವಾರ ತಿಳಿಸಿದ್ದಾರೆ.
‘ಏ.1ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಹರ್ಷಲ್ ಗಾಯಗೊಂಡಿದ್ದರು. ಹಲವು ಬಾರಿ ಎಕ್ಸ್-ರೇ ತೆಗೆದ ಬಳಿಕ ಮೂಳೆ ಮುರಿದಿರುವುದು ದೃಢಪಟ್ಟಿದೆ. 3ರಿಂದ 4 ವಾರಗಳ ಕಾಲ ಅವರು ಕ್ರಿಕೆಟ್‌ನಿಂದ ಹೊರಗುಳಿಯಬೇಕಿದ್ದು, ಬದಲಿ ಆಟಗಾರನಿಗಾಗಿ ಹುಡುಕಾಟ ಆರಂಭಿಸಿದ್ದೇವೆ’ ಎಂದು ಪಾಂಟಿಂಗ್ ಹೇಳಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲಿಂದು ರಸೆಲ್ vs ರಬಾಡ ಫೈಟ್
ಈ ಆವೃತ್ತಿಯಲ್ಲಿ ಹರ್ಷಲ್ 2 ಪಂದ್ಯಗಳನ್ನು ಆಡಿದ್ದರು. ಅದರಲ್ಲೂ ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪಟೇಲ್ 40 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಆ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ತಂಡವು ಸೂಪರ್ ಓವರ್’ನಲ್ಲಿ ರೋಚಕ ಜಯ ಸಾಧಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇದುವರೆಗೂ 6 ಪಂದ್ಯಗಳನ್ನಾಡಿದ್ದು, ತಲಾ 3 ಗೆಲುವು, ಸೋಲು ಕಂಡಿದ್ದು, ಇದೀಗ ಶುಕ್ರವಾರ ಈಡನ್’ಗಾರ್ಡನ್ ಮೈದಾನದಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...