ಹಾಸನ(ಏ.19): ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದ್ದಂತೆ ಇತ್ತ ಸದ್ದಿಲ್ಲದೆ ಬೆಟ್ಟಿಂಗ್ ಕೂಡ ನಡೆಯುತ್ತಿದೆ. ಹಲವು ಬೆಟ್ಟಿಂಗ್ ಅಡ್ಡೆಗಳ ಮೇಲೆ ಪೊಲೀಸರು ಈಗಾಗಲೇ ದಾಳಿ ಮಾಡಿದ್ದರೆ. ಆದರೆ ಸ್ನೇಹಿತರು, ಬುಕ್ಕಿಗಳ ಜೊತೆ ಬೆಟ್ಟಿಂಗ್ ಮಾತ್ರ ಈಗಲೂ ನಡೆಯುತ್ತಿದೆ ಅನ್ನೋ ವರದಿಗಳಿವೆ. ಇದೀಗ ಹಾಸನದ ಆಲೂರು ತಾಲೂಕಿನ ಬದುಕರಹಳ್ಳಿ ಗ್ರಾಮದ  ಡಿಪ್ಲೋಮಾ ವಿದ್ಯಾರ್ಥಿ ಇದೇ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ಗೆ ಜೀವ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: IPLಬೆಟ್ಟಿಂಗ್: ಬೆಂಗಳೂರು ಪೊಲೀಸರಿಂದ 8 ಬುಕ್ಕಿ ಅರೆಸ್ಟ್, 39.49 ರೂ ಲಕ್ಷ ವಶ!

ಹಾಸನದ ರಾಜೀವ್ ಕಾಲೇಜ್ ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ  ಲತೇಶ್ ಕುಮಾರ್ ಎಂಬ ಯುವಕ, ಸದ್ಯ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ಆಡಿದ್ದ. ಆರಂಭದಲ್ಲಿ ಒಂದೆರೆಡು ಪಂದ್ಯ ಗೆದ್ದಿದ್ದ ಲತೇಶ್ ಕುಮಾರ್, ಬಳಿಕ ಎಲ್ಲಾ ಪಂದ್ಯಗಳ ಮೇಲಿನ ಬೆಟ್ಟಿಂಗ್ ಸೋತಿದ್ದ. ಹಣ ಒದಗಿಸಲು ಲತೇಶ್ ಹಲವು ಪ್ರಯತ್ನಗಳನ್ನು ಮಾಡಿದರೂ ಯಾವುದೂ ಕೈಗೂಡಲಿಲ್ಲ.

ಇದನ್ನೂ ಓದಿ: ಬುಕ್ಕಿ ಡೈರಿಯಲ್ಲಿ ಮತ್ತಷ್ಟು ಸೆಲಿಬ್ರಿಟಿಗಳ ಹೆಸರು..!

ಅತ್ತ ಬುಕ್ಕಿ ಹಣ ನೀಡುವಂತೆ ಪ್ರತಿ ದಿನ ಲತೇಶ್ ಕಮಾರ್ ಪೀಡಿಸುತ್ತಿದ್ದ. ಇದರಿಂದ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದ. ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ಲತೇಶ್ ಕುಮಾರ್‌ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲತೇಶ್ ಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.