ಮೊಹಾಲಿಯಲ್ಲಿ ನಡೆಯುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದಿರುವ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದಲ್ಲಿ ಸ್ಥಾನ ಪಡೆದವರು ಯಾರು? ಇಲ್ಲಿದೆ ವಿವರ.
ಮೊಹಾಲಿ(ಏ.01): ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗಾಗಿ ಹೋರಾಟಕ್ಕಿಳಿದಿದೆ. ಟಾಸ್ ಗೆದ್ದಿರುವ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡು ತಂಡಗಳು ಆಡಿದ 3 ಪಂದ್ಯದಲ್ಲಿ 2 ಗೆಲುವು ಸಾಧಿಸಿದೆ. ಆದರೆ ಡೆಲ್ಲಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ 5ನೇ ಸ್ಥಾನದಲ್ಲಿದೆ.ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅಮಿತ್ ಮಿಶ್ರಾ ಬದಲು ಅವೇಶ್ ಖಾನ್‌ಗೆ ಅವಕಾಶ ನೀಡಲಾದಿದೆ.
ಇದನ್ನೂ ಓದಿ: RCB ಹೀನಾಯ ಸೋಲಿನ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?
ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೂಪರ್ ಓವರ್ ಮೂಲಕ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಪಂಜಾಬ್ ವಿರುದ್ಧ ಅಬ್ಬರಿಸೋ ವಿಶ್ವಾಸದಲ್ಲಿದೆ. ಯುವ ಕ್ರಿಕೆಟಿಗರನ್ನೇ ಹೊಂದಿರುವ ಡೆಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇತ್ತ ಪಂಜಾಬ್ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.
