ದೆಹಲಿ(ಮೇ.04): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಅಂತಿಮ ಲೀಗ್ ಹೋರಾಟ ಕಡಿಮೆ ಸ್ಕೋರ್ ಆಗಿದ್ದರೂ ರೋಚಕ ಹೋರಾಟ ಮೂಡಿಬಂತು. ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಡೆಲ್ಲಿ ಅಂಕಪಟ್ಟಿಯಿಂದ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ಇತ್ತ ಪ್ಲೇ ಆಫ್‌ಗೆ ಇದ್ದ ಕೊನೆಯ ಅವಕಾಶವನ್ನೂ ರಾಜಸ್ಥಾನ ರಾಯಲ್ಸ್ ಕಳೆದುಕೊಂಡಿತು. 

ಇದನ್ನೂ ಓದಿ: ಲಾಸ್ಟ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್‌ಗೆ ಕೊಹ್ಲಿ ಮೆಸೇಜ್!

ಗೆಲುವಿಗೆ 116ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಎಂದಿನಂತ ಆರಂಭ ಉತ್ತಮವಾಗಿರಲಿಲ್ಲ. 16 ರನ್ ಸಿಡಿಸಿದ ಶಿಖರ್ ಧವನ್ ವಿಕೆಟ್ ಪತನಗೊಳ್ಳುತ್ತಿದ್ದಂತೆ, ರಾಜಸ್ಥಾನ ತಂಡದಲ್ಲಿ ಹೊಸ ಹುರುಪು ಮೂಡಿತು. ಧವನ್ ಬೆನ್ನಲ್ಲೇ ಪೃಥ್ವಿ ಶಾ ಕೇವಲ 8 ರನ್ ಸಿಡಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಹೋರಾಟ 15 ರನ್‌ಗೆ ಅಂತ್ಯವಾಯಿತು.

ಇದನ್ನೂ ಓದಿ: ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!

ಕೊಲಿನ್ ಇನ್‌ಗ್ರಾಂ 12 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ರಿಷಬ್ ಪಂತ್ ಹೋರಾಟ ಮುಂದುವರಿಸಿದರು. ಶೆರ್ಫಾನೆ ರುದ್‌ಫೋರ್ಡ್ 12 ರನ್ ಸಿಡಿಸಿ ಔಟಾದರು. ಭರ್ಜರಿ ಸಿಕ್ಸರ್ ಸಿಡಿಸಿದ ಪಂತ್ ಆಕರ್ಷಖ ಅರ್ಧಶತಕ ಸಿಡಿಸಿದರು. ಇಷ್ಟೇ ಅಲ್ಲ ಇನ್ನೂ ಎಸೆತ ಬಾಕಿ 23 ಎಸೆತ ಬಾಕಿ ಇರುವಂತೆ ತಂಡಕ್ಕೆ 5 ವಿಕೆಚ್ ಗೆಲುವು ತಂದುಕೊಟ್ಟರು. ಪಂತ್ ಅಜೇಯ 53 ರನ್ ಸಿಡಿಸಿ ಮಿಂಚಿದರು.