ಹೈದರಾಬಾದ್(ಮಾ.17): ಬಾಲ್ ಟ್ಯಾಂಪರಿಂಗ್ ಮೂಲಕ ನಿಷೇಧದ ಶಿಕ್ಷೆ ಅನುಭವಿಸಿದ ಆಸ್ಟ್ರೇಲಿಯಾ ಉಪನಾಯಕ ಡೇವಿಡ್ ವಾರ್ನರ್ ಇದೀಗ ಐಪಿಎಲ್ ಟೂರ್ನಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಆವೃತ್ತಿಯಿಂದ ಹೊರಗುಳಿದಿದ್ದ ವಾರ್ನರ್, ಇದೀಗ ಸನ್‌ರೈಸರ್ಸ್ ಹೈದರಾಬಾದ್ ಸೇರಿಕೊಂಡಿದ್ದಾರೆ. ತಂಡ ಕೂಡಿಕೊಂಡ ಬೆನ್ನಲ್ಲೇ ವಾರ್ನರ್ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಐಪಿಎಲ್ 2019: KKR ತಂಡ ಸೇರಿಕೊಂಡ ಮತ್ತೊಬ್ಬ ಕನ್ನಡಿಗ!

ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿರುವುದು ಅತೀವ ಸಂತಸ ತಂದಿದೆ. ಕಳೆದ 12 ತಿಂಗಳಲ್ಲಿ ನನ್ನನ್ನು ಬೆಂಬಲಿಸಿದ, ಪ್ರೋತ್ಸಾಹಿಸಿದ ಫ್ರಾಂಚೈಸಿ ಹಾಗೂ ಅಭಿಮಾನಿಗಳಿಗೆ ನಾನೆಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ವಾರ್ನರ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ನಿಷೇಧದ ಶಿಕ್ಷೆಯಲ್ಲಿನ ಕಠಿಣ ದಿನಗಳನ್ನ ನೆನೆದು ಭಾವುಕರಾಗಿದ್ದಾರೆ.

 

 

ಇದನ್ನೂ ಓದಿ: ಐಪಿಎಲ್ ತಂಡ ಸೇರಿಕೊಂಡ ಸ್ಮಿತ್, ವಾರ್ನರ್- SRH,RR ಮತ್ತಷ್ಟು ಬಲಿಷ್ಠ!

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, 2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ. ನಿಷೇಧದಿಂದಾಗಿ 11ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು.