ಚಾಣಾಕ್ಷ ನಾಯಕ ಎಂ.ಎಸ್.ಧೋನಿ ಮತ್ತೊಂದೆಡ ಪವರ್ ಹಿಟ್ಟರ ಆ್ಯಂಡ್ರೆ ರಸೆಲ್. ಹೀಗಾಗಿಯೇ ಇಂದಿನ  CSK Vs KKR ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಇಂದಿನ ಪಂದ್ಯಕ್ಕೆ ಉಭಯ ತಂಡಗಳ ಬದಲಾವಣೆ ಏನು?ಇಲ್ಲಿದೆ ವಿವರ.

ಚೆನ್ನೈ(ಏ.09): ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಇಂದು ಮುಖಾಮುಖಿಯಾಗುತ್ತಿದೆ. ಇದು ಧೋನಿ ನಾಯಕತ್ವ ಅನುಭವಿ ಚೆನ್ನೈ VS ಕೆಕೆಆರ್ ತಂಡದ ಆಂಡ್ರೆ ರಸೆಲ್ ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ. ಎರಡು ಬಲಿಷ್ಟ ತಂಡ. ರಸೆಲ್ ಆರ್ಭಟದಿಂದ ಕೆಕೆಆರ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದರೆ, ಇತ್ತ ಚೆನ್ನೈ 2ನೇ ಸ್ಥಾನದಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಇದನ್ನೂ ಓದಿ:IPL 2019: ಚೆನ್ನೈನಿಂದ ಫೈನಲ್ ಪಂದ್ಯ ಸ್ಥಳಾಂತರ, ಬೆಂಗ್ಳೂರಿಗೆ ಶಿಫ್ಟ್ ?

ಮೊದಲೆರಡು ಸ್ಥಾನದಲ್ಲಿರುವ ಬಲಿಷ್ಠ ತಂಡಗಳ ಹೋರಾಟ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ಆವೃತ್ತಿಯಲ್ಲಿ ತವರಿನಲ್ಲಿ ಧೋನಿ ಸೈನ್ಯ ಅಜೇಯ ಓಟ ಮುಂದವರಿಸಿದೆ. ಇದೀಗ ರಸೆಲ್ ಆರ್ಭಟಕ್ಕೆ ಬ್ರೇಕ್ ಹಾಕಲು CSK ಮುಂದಾಗಿದೆ. ಇಂದಿನ ಪಂದ್ಯಕ್ಕೆ ಉಭಯ ತಂಡಗಳ ಸಂಭವನೀಯ ತಂಡ ಇಲ್ಲಿದೆ.

ಇದನ್ನೂ ಓದಿ: ಪಂಜಾಬ್ ಗೆಲುವಿನ ದಡ ಸೇರಿಸಿದ ಕನ್ನಡಿಗರು

CSK ಸಂಭವನೀಯ ತಂಡ:<br/>ಎಂ.ಎಸ್.ಧೋನಿ(ನಾಯಕ), ಫಾಪ್ ಡುಪ್ಲೆಸಿಸ್, ಸುರೇಶ್ ರೈನಾ, ಕೇದಾರ್ ಜಾಧವ್, ದೀಪಕ್ ಚಹಾರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಕಗ್ಲಿಜಿನ್

KKR ಸಂಭವನೀಯ ತಂಡ:<br/>ದಿನೇಶ್ ಕಾರ್ತಿಕ್(ನಾಯಕ), ಕ್ರಿಸ್ ಲಿನ್, ಸುನಿಲ್ ನರೈನ್, ರಾಬಿನ್ ಉತ್ತಪ್ಪ, ನಿತೀಶ್ ರಾಣ, ಆಂಡ್ರೆ ರಸೆಲ್, ಶುಮಾನ್ ಗಿಲ್, ಪಿಯೂಷ್ ಚಾವ್ಲಾ, ಕುಲ್ದೀಪ್ ಯಾದವ್, ಹ್ಯಾರಿ ಗುರ್ನೆ, ಶ್ರೀಕಾಂತ್<br/>