Asianet Suvarna News Asianet Suvarna News

RCBಗೆ ಮತ್ತಷ್ಟು ಬಲ- ತಂಡ ಸೇರಿಕೊಳ್ಳಲಿದ್ದಾರೆ ಆಸಿಸ್ ಆಲ್ರೌಂಡರ್ !

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಸೋಲಿನಿಂದ ಜರ್ಝರಿತವಾಗಿದೆ. ಇದೀಗ ಗೆಲುವಿನ ಹಳಿಗೆ ಮರಳು RCB ರಣತಂತ್ರ ರೂಪಿಸುತ್ತಿದೆ. ಇದರ ಜೊತೆಗೆ ತಂಡಕ್ಕೆ ಆಸ್ಟ್ರೇಲಿಯಾಾ ಆಲ್ರೌಂಡರ್ ಕೂಡ ಸೇರಿಕೊಳ್ಳುತ್ತಿದ್ದಾರೆ. 

Ipl 2019  Australian all rounder Marcus Stoinis to join rcb
Author
Bengaluru, First Published Apr 1, 2019, 10:44 PM IST
  • Facebook
  • Twitter
  • Whatsapp

ಜೈಪುರ(ಏ.01): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ 3 ಪಂದ್ಯ ಸೋತು ನಿರಾಸೆ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ(ಏ.02) ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ತಂಡದದಲ್ಲಿ ಮಹತ್ತರ ಬದಲಾವಣೆಯಾಗೋ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೊಯ್ನಿಸ್ RCB ತಂಡ ಸೇರಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ...!

ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಪ್ರತಿನಿಧಿಸಿದ ಸ್ಟೊಯ್ನಿಸ್ ಇದೀಗ ಸರಣಿ ಮುಗಿಸಿ ನೇರವಾಗಿ ಭಾರತಕ್ಕೆ ಬಂದಿಳಿಯಲಿದ್ದಾರೆ. ಭಾರತ ಪ್ರವಾಸದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ಸ್ಟೊಯ್ನಿಸ್ ಇದೀಗ RCB ತಂಡಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.

ಇದನ್ನೂ ಓದಿ: ಚೆನ್ನೈ ವಿರುದ್ಧದ ಸೋಲಿನ ಬೆನ್ನಲ್ಲೇ RR ನಾಯಕ ರಹಾನೆಗೆ ಸಂಕಷ್ಟ!

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಟೊಯ್ನಿಸ್‌ ಬೆಂಗಳೂರು ತಂಡಕ್ಕೆ ನೆರವಾಗಲಿದ್ದಾರೆ. ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲೂ ಬ್ಯಾಟ್ ಬೀಸಲಿರುವ ಸ್ಟೊಯ್ನಿಸ್ ತಂಡದ ಹಣೆಬರಹ  ಬದಲಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. RCB ತಂಡದ ಆರಂಭಿಕರ ಸಮಸ್ಯೆಗೂ ಸ್ಟೊಯ್ನಿಸ್ ಪರಿಹಾರವಾಗಲಿದ್ದಾರೆ.
 

Follow Us:
Download App:
  • android
  • ios