ಜೈಪುರ(ಏ.23): ಟಿ20 ಕ್ರಿಕೆಟ್‌ನಲ್ಲಿ ಆಸ್ಪ್ರೇಲಿಯಾದ ಆಸ್ಟನ್‌ ಟರ್ನರ್‌ ಅನಗತ್ಯ ದಾಖಲೆಯೊಂದಕ್ಕೆ ಗುರಿಯಾಗಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಆಡುತ್ತಿರುವ ಟರ್ನರ್‌, ಸತತ 3 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದಕ್ಕೂ ಮುನ್ನ ಭಾರತ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಟಿ20 ಪಂದ್ಯ, ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲೂ ಸೊನ್ನೆಗೆ ಔಟಾಗಿದ್ದರು.

ಇದನ್ನೂ ಓದಿ: ಪಂತ್ ಅಬ್ಬರಕ್ಕೆ ದಾದಾ ಫುಲ್ ಖುಷ್!: ಬಳಿಕ ನಡೆದದ್ದೇನು? ವಿಡಿಯೋ ವೈರಲ್

 ಟಿ20 ಇತಿಹಾಸದಲ್ಲಿ ಸತತ 5 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ವಿಶ್ವದ ಮೊದಲ ಆಟಗಾರ ಎನ್ನುವ ಅಪಖ್ಯಾತಿಗೆ ಟರ್ನರ್‌ ಗುರಿಯಾಗಿದ್ದಾರೆ. 5 ಪಂದ್ಯಗಳ ಪೈಕಿ 4ರಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದಾರೆ ಎನ್ನುವುದು ಗಮನಾರ್ಹ.