ರಿಷಭ್ ಪಂತ್, ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್| ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಂಡಿಯೂರಿದ ರಾಜಸ್ಥಾನ| ಪಂತ್ ಸಿಕ್ಸರ್ಗೆ ದಾದಾ ಫುಲ್ ಖುಷ್

ನವದೆಹಲಿ[ಏ.23]: ರಿಷಭ್ ಪಂತ್ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್, ಸೆಂಚುರಿ ಸಿಡಿಸಿದ ಅಜಿಂಕ್ಯ ರಹಾನೆಗೆ ಭಾರೀ ನಿರಾಸೆಯುಂಟು ಮಾಡಿದೆ. ರಾಜಸ್ಥಾನದ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗೆಲುವು ಸಾಧಿಸಿ, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಸದ್ಯ ಈ ಒಪಂದ್ಯದ ವಿಡಿಯೋ ಹಾಗೂ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ.

Scroll to load tweet…
Scroll to load tweet…

ಹೌದು, ರಿಷಭ್ ಪಂತ್ 78 ರನ್ ಗಳ ಆಟವಾಡಿದ್ದಾರೆ ಹಾಗೂ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಪಂತ್ ಸಿಕ್ಸರ್ ಕಂಡು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಅಚ್ಚರಿಗೀಡಾಗಿದ್ದಾರೆ. ಖುಷಿಯನ್ನು ತಡೆಯಲಾಗದ ದಾದಾ ಪಂದ್ಯ ಮುಗಿದದ್ದೇ ತಡ ಪಂತ್ ರನ್ನು ಎತ್ತಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದೆ. 

Scroll to load tweet…

ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿದ ಪಂತ 'ಪಂದ್ಯ ಮುಗಿಸಿ ಮರಳುತ್ತಿದ್ದಾಗ ಪ್ರತಿಯೊಬ್ಬರು ಖುಷಿ ವ್ಯಕ್ತಪಡಿಸಿದ್ದಾರೆ. ಸೌರವ್ ಸರ್ ಕೂಡಾ ನನ್ನನ್ನು ಎತ್ತಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಇದು ನನ್ನ ಪಾಲಿಗೆ ಅತ್ಯದ್ಭುತ ಹಾಗೂ ಮರೆಯಲಾಗದ ಕ್ಷಣ. ಅದು ವಿಭಿನ್ನ ಅನುಭವವಾಗಿತ್ತು' ಎಂದಿದ್ದಾರೆ.