ದೆಹಲಿ(ಮಾ.25): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ 2ನೇ ಪಂದ್ಯದತ್ತ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿರುವ CSK  ನಾಯಕ ಎಂ.ಎಸ್.ಧೋನಿ ರಿಲಾಕ್ಸ್ ಮೂಡ್‌ಗೆ ಜಾರಿದ್ದಾರೆ. 

ಇದನ್ನೂ ಓದಿ: IPL 2019:ಮೈದಾನದಲ್ಲಿ ಕ್ರಿಕೆಟ್ ತಲೈವಾ- ಗ್ಯಾಲರಿಯಲ್ಲಿ ತಮಿಳು ತಲೈವಾ!

ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಧೋನಿ ಪುತ್ರಿ ಝಿವಾ ಧೋನಿ ಜೊತೆ ಕಾಲ  ಕಳೆದಿದ್ದಾರೆ.  ಝಿವಾ ಜೊತೆ 6 ಭಾಷೆಗಳಲ್ಲಿ ಧೋನಿ ಮಾತನಾಡಿದ್ದಾರೆ. ವಿಶೇಷ ಅಂದರೆ ಪುತ್ರಿ ಝಿವಾ ಧೋನಿ 6 ಭಾಷೆಗಳಲ್ಲೇ ಧೋನಿಗೆ ಉತ್ತರಿಸಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.

 

 
 
 
 
 
 
 
 
 
 
 
 
 
 
 

A post shared by M S Dhoni (@mahi7781) on Mar 24, 2019 at 6:19am PDT

 

ಇದನ್ನೂ ಓದಿ: ರೋರ್‌ ಆಫ್‌ ದ ಲಯನ್‌’: ಧೋನಿ-ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೇಳಿದ ಮಾತುಗಳಿವು

ತಮಿಳು ಭಾಷೆಯಿಂದ ಆರಂಭಿಸಿ, ಉರ್ದುವರೆಗೂ 6 ಭಾಷೆಗಳಲ್ಲಿ ಧೋನಿ ಹಾಗೂ ಪುತ್ರಿ ಝಿವಾ ಧೋನಿ ಮಾತನಾಡಿದ್ದಾರೆ. ಕಳೆದ ವರ್ಷ ಝಿವಾ ಮಲೆಯಾಳಂ ಸಿನಿಮಾ ಹಾಡನ್ನೂ ಸಂಪೂರ್ಣವಾಗಿ ಹಾಡಿ  ಗಮನಸೆಳಿದಿದ್ದರು. ಇದೀಗ 6 ಭಾಷೆಯಲ್ಲಿ ಮಾತನಾಡೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.