ಕೋಲ್ಕತಾ(ಮೇ.05): ಪುಣೆಯಲ್ಲಿ ನಡೆಯ ಬೇಕಿದ್ದ ಐಪಿಎಲ್'ನ  ಎರಡು ಪ್ಲೇ ಆಫ್ ಪಂದ್ಯಗಳನ್ನು ಇಲ್ಲಿನ ಈಡನ್ ಗಾರ್ಡನ್ ಅಂಗಳಕ್ಕೆ ಸ್ಥಳಾಂತರಿಸಲಾಗಿದೆ. ಮೇ.23 ಮತ್ತು 25ರಂ ದು ನಡೆಯಲಿರುವ ಎಲಿಮಿನೇಟರ್ ಮತ್ತು 2ನೇ ಕ್ವಾಲಿಫೈಯರ್ ಪಂದ್ಯಗಳಿಗೆ ಕೋಲ್ಕತಾ ಆತಿಥ್ಯ ವಹಿಸಲಿದೆ ಎಂದು ಐಪಿಎಲ್  ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಕಾವೇರಿ  ನೀರು ಹಂಚಿಕೆ ವಿವಾದಿದಂದಾಗಿ ಚೆನ್ನೈನಲ್ಲಿ ನಡೆಯ ಬೇಕಿದ್ದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿತ್ತು. ಪುಣೆ ಈಗಾಗಲೇ 6 ಪಂ ದ್ಯಗಳಿಗೆ ಆತಿಥ್ಯ ವಹಿಸಿ ದರಿಂದ ಪ್ಲೇ ಆಫ್  ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ. ಮೊದಲ ಕ್ವಾಲಿಫೈಯರ್  ಹಾಗೂ ಫೈನಲ್  ಪಂದ್ಯ ಮುಂಬೈನಲ್ಲಿ ನಡೆಯಲಿದೆ.