ಸ್ನೇಹಿತನನ್ನು ಕೋಚ್ ಆಗಿ ನೇಮಿಸಿಕೊಂಡ ಧೋನಿ..!

IPL 2018 CSK appoint Rajiv Kumar as fielding coach
Highlights

ರಾಜೀವ್, ದೇಸಿ ಕ್ರಿಕೆಟ್‌'ನಲ್ಲಿ ಬಿಹಾರ ಹಾಗೂ ಜಾರ್ಖಂಡ್ ತಂಡಗಳ ನಾಯಕರಾಗಿದ್ದರು. ಎಂ.ಎಸ್.ಧೋನಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡುವ ಮುನ್ನ, ರಾಜೀವ್ ನಾಯಕತ್ವದಲ್ಲಿ ಆಡಿದ್ದರು.

ಚೆನ್ನೈ: ಐಪಿಎಲ್ 11ನೇ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ರಾಜೀವ್ ಕುಮಾರ್ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ರಿಕ್ಸನ್ ಸ್ಥಾನವನ್ನುಅವರು ತುಂಬಲಿದ್ದಾರೆ.

ರಾಜೀವ್, ದೇಸಿ ಕ್ರಿಕೆಟ್‌'ನಲ್ಲಿ ಬಿಹಾರ ಹಾಗೂ ಜಾರ್ಖಂಡ್ ತಂಡಗಳ ನಾಯಕರಾಗಿದ್ದರು. ಎಂ.ಎಸ್.ಧೋನಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡುವ ಮುನ್ನ, ರಾಜೀವ್ ನಾಯಕತ್ವದಲ್ಲಿ ಆಡಿದ್ದರು.

‘ರಾಜೀವ್ ಹಾಗೂ ಧೋನಿ ನಡುವೆ ಉತ್ತಮ ಬಾಂಧವ್ಯವಿದೆ. ಜತೆಗೆ ಅತ್ಯುತ್ತಮ ಫೀಲ್ಡಿಂಗ್ ಕೋಚ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಈಗಾಗಲೇ ತಂಡದೊಂದಿಗೆ ಅವರು ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ’ ಎಂದು ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ.

loader