2 ವಾರಗಳ ಹಿಂದೆ ರಾಜಸ್ಥಾನ-ಸನ್‌'ರೈಸರ್ಸ್‌ ಪಂದ್ಯದಲ್ಲಿ ಓವರ್ ಒಂದು 7 ಎಸೆತಗಳಿಗೆ ಸಾಕ್ಷಿಯಾಗಿತ್ತು. ಸನ್'ರೈಸರ್ಸ್‌-ಚೆನ್ನೈ ಪಂದ್ಯದಲ್ಲಿ ಬೌಲರ್ ನೋಬಾಲ್ ಎಸೆದಿದ್ದರೂ ಅದನ್ನು ಗಮನಿಸುವಲ್ಲಿ ಅಂಪೈರ್‌'ಗಳು ವಿಫಲರಾಗಿದ್ದರು. ಸಾಮಾಜಿಕ ತಾಣಗಳಲ್ಲಿ ಅಂಪೈರ್‌'ಗಳ ಎಡವಟ್ಟಿನ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.

ನವದೆಹಲಿ(ಏ.25): ಪದೇ ಪದೇ ಎಡವಟ್ಟು ಮಾಡುತ್ತಿರುವ ಅಂಪೈರ್‌'ಗಳಿಗೆ ಹೆಚ್ಚು ಜಾಗರೂಕರಾಗಿರುವಂತೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಶುಕ್ಲಾ, ಮ್ಯಾಚ್ ರೆಫ್ರಿಗಳ ಜತೆ ಮಾತನಾಡಿದ್ದು ಅಂಪೈರ್‌'ಗಳಿಗೆ ಎಚ್ಚರ ವಹಿಸುವಂತೆ ತಿಳಿಸಲು ಹೇಳಿದ್ದಾರೆ’ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.